2026-06-08 06:39:37

Galaxy Eye Mission vision satellite successfully launched|ಗ್ಯಾಲಕ್ಸ್‌ಐ ಮಿಷನ್ ದೃಷ್ಟಿ ಉಪಗ್ರಹ ಯಶಸ್ವಿ ಉಡಾವಣೆ|Speed News Kannada

Galaxy Eye Mission vision satellite successfully launched|ಗ್ಯಾಲಕ್ಸ್‌ಐ ಮಿಷನ್ ದೃಷ್ಟಿ ಉಪಗ್ರಹ ಯಶಸ್ವಿ ಉಡಾವಣೆ|Speed News Kannada

ಬೆಂಗಳೂರು ಮೂಲದ ಸ್ಪೇಸ್‌ಟೆಕ್ ಸ್ಟಾರ್ಟ್‌ಅಪ್ GalaxEye ಅಭಿವೃದ್ಧಿಪಡಿಸಿದ “ಮಿಷನ್‌ ವಿಷನ್‌” ಉಪಗ್ರಹವನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ವೇಸ್‌ ಎಕ್ಸ್‌ ಫಾಲ್ಕನ್-9 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಈ ಕಂಪನಿಯು ಸಂಪೂರ್ಣವಾಗಿ ದೇಶೀಯವಾಗಿ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದು ವಿಶೇಷ. ಸುಮಾರು 190 ಕೆಜಿ ತೂಕದ ಈ ಉಪಗ್ರಹವು SAR ಮತ್ತು ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನಗಳನ್ನು ಹೊಂದಿರುವ ವಿಶ್ವದ ಮೊದಲ ಉಪಗ್ರಹವಾಗಿದೆ.

ಭೂಮಿಯಿಂದ ಸುಮಾರು 500 ಕಿ.ಮೀ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಉಪಗ್ರಹವು ಮೋಡ, ಕತ್ತಲು ಪರಿಸ್ಥಿತಿಯಲ್ಲಿಯೂ ಸ್ಪಷ್ಟ ಚಿತ್ರಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. AI ಆಧಾರಿತ ಪ್ರೊಸೆಸರ್ ಮೂಲಕ ತಕ್ಷಣದ ಡೇಟಾ ವಿಶ್ಲೇಷಣೆ ಕೂಡ ಸಾಧ್ಯವಾಗಲಿದೆ.ಭವಿಷ್ಯದಲ್ಲಿ 8–12 ಉಪಗ್ರಹಗಳ ಸಮೂಹವನ್ನು ಸ್ಥಾಪಿಸುವ ಯೋಜನೆಯೊಂದಿಗೆ, ಕೃಷಿ, ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಇದು ಮಹತ್ವದ ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.ಒಟ್ಟಿನಲ್ಲಿ, “ಮಿಷನ್ ದೃಷ್ಟಿ” ಯಶಸ್ಸು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಖಾಸಗಿ ವಲಯದ ದೊಡ್ಡ ಸಾಧನೆ ಎಂದು ಪರಿಗಣಿಸಲಾಗಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.