2026-05-15 08:39:02

fuel price hike effect; private bus fare too hiked| ಇಂಧನ ಬೆಲೆ ಏರಿಕೆ; ಇದೀಗ ಖಾಸಗಿ ಬಸ್‌ ಪ್ರಯಾಣ ದರವೂ ಹೆಚ್ಚಳ|Speed News Kannada

fuel price hike effect; private bus fare too hiked| ಇಂಧನ ಬೆಲೆ ಏರಿಕೆ; ಇದೀಗ ಖಾಸಗಿ ಬಸ್‌ ಪ್ರಯಾಣ ದರವೂ ಹೆಚ್ಚಳ|Speed News Kannada

ಬೆಂಗಳೂರು:  ಪೆಟ್ರೋಲ್, ಡೀಸೆಲ್, ಸಿಎನ್‌ ಜಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ಶಾಕ್ ಜತೆಗೆ ಬಸ್‌ ಪ್ರಯಾಣ ದರ ಏರಿಸುವ ಮೂಲಕ ಖಾಸಗಿ ಬಸ್​​ ಮಾಲೀಕರು ಮತ್ತೊಂದು ಶಾಕ್​ ನೀಡಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 3 ರೂ. ಹೆಚ್ಚಳವಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಖಾಸಗಿ ಬಸ್‌ ಪ್ರಯಾಣ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಅಂದಾಜು  ಶೇ.20 ರಿಂದ ಶೇ. 30ರಷ್ಟು ಟಿಕೆಟ್ ದರ ಏರಿಕೆ ಮಾಡುವ ಬಗ್ಗೆ ಖಾಸಗಿ ಬಸ್​​ ಮಾಲೀಕರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ ಪ್ರತಿದಿನ ಒಂದು ಬಸ್​​ ಗೆ ಕನಿಷ್ಠ 150 ಲೀಟರ್ ಡಿಸೇಲ್​​ ಹಾಕಿಸುತ್ತೇವೆ. ಇಂಧನ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವ ಕಾರಣ ನಿತ್ಯ ರೂ.450 ಹೆಚ್ಚುವರಿಯಾಗಿ ಹೊರೆಯಾಗಲಿದೆ. ಆದ್ದರಿಂದ ಟಿಕೆಟ್​ ದರ ಏರಿಸುವುದು ಅನಿವಾರ್ಯ. ಇದರ ಪರಿಣಾಮ ಸಹಜವಾಗಿಯೇ ಪ್ರಯಾಣಿಕರ ಮೇಲೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೈಪೋಟಿಯ ಮೇಲೆ ಬೆಲೆ ಏರಿಸುತ್ತಿವೆ. ಪೆಟ್ರೋಲ್, ಡೀಸೆಲ್​, ಚಿನ್ನ,ಬೆಳ್ಳಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ.ಈ ಸಾಲಿಗೆ ಖಾಸಗಿ ಬಸ್‌ ಪ್ರಯಾಣ ದರವೂ ಸೇರಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.