2026-06-25 04:34:31

Friend robbed of Rs. 7 crore for trusting him | ನಂಬಿಕೆಯಿಟ್ಟು ಬ್ಯಾಂಕ್‌ ಅಕೌಂಟ್ ವಿವರ ಕೊಟ್ಟಿದ್ದಕ್ಕೆ ಏಳು ಕೋಟಿ ರೂ. ಮುಂಡಾಯಿಸಿದ ಗೆಳೆಯ | Speed News Kannada

Friend robbed of Rs. 7 crore for trusting him | ನಂಬಿಕೆಯಿಟ್ಟು ಬ್ಯಾಂಕ್‌ ಅಕೌಂಟ್ ವಿವರ ಕೊಟ್ಟಿದ್ದಕ್ಕೆ ಏಳು ಕೋಟಿ ರೂ. ಮುಂಡಾಯಿಸಿದ ಗೆಳೆಯ | Speed News Kannada

ಬೆಂಗಳೂರು : ಬೆಂಗಳೂರಲ್ಲಿ ಸೈಬರ್ ವಂಚನೆ ತೀರಾ ಮಾಮೂಲಿಯಾಗಿದ್ದು, ಇಲ್ಲೊಬ್ಬ ವಿದ್ಯಾರ್ಥಿ ತನ್ನ ಫ್ರೆಂಡ್ನ ನಂಬಿ ಸಂಕಷ್ಟಕ್ಕೆ ಸಿಲುಕಿದ್ದಾನೆ.
ವಿದ್ಯಾರ್ಥಿಯೊಬ್ಬ ಸೈಬರ್ ವಂಚನೆಯ (Cyber Crime) ಖೆಡ್ಡಾದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಂದು ವರ್ಷದ ಗೆಳೆತನ ನಂಬಿದ ವಿದ್ಯಾರ್ಥಿ ತನ್ನ ಬ್ಯಾಂಕ್ ಖಾತೆಯ ವಿವರವನ್ನು ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡು ಇದೀಗ ಪೇಚೆಗೆ ಸಿಲುಕಿದ್ದಾನೆ.
ಒಂದು ವರ್ಷದ ಹಿಂದೆ ವಿದ್ಯಾರ್ಥಿಗೆ ಪರಿಚಯವಾಗಿದ್ದ ಆಯುಷ್ ಎಂಬಾತ ತನ್ನ ಅಕೌಂಟ್ ಬ್ಲಾಕ್ ಆಗಿದೆ ಎಂದು ವಿದ್ಯಾರ್ಥಿ ಬಳಿ ಆತನ ಬ್ಯಾಂಕ್ ವಿವರಗಳನ್ನು ಕೇಳಿದ್ದನು. ಆತನನ್ನು ನಂಬಿದ್ದ ವಿದ್ಯಾರ್ಥಿ ತನ್ನ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಎಲ್ಲವನ್ನೂ ಆಯುಷ್‌ಗೆ ನೀಡಿದ್ದನು. ಇದನ್ನೇ ಬಳಸಿಕೊಂಡ ಆಯುಷ್, ಅಕೌಂಟ್ ಮೂಲಕ ಸುಮಾರು 7 ಕೋಟಿ ರೂ. ಹಣ ವರ್ಗಾಯಿಸಿದ್ದು, ಇದೇ ವಿಚಾರದಿಂದ ಬ್ಯಾಂಕ್ ಇತ್ತೀಚೆಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿದೆ.
ಸೈಬ‌ರ್ ವಂಚನೆ ನಡೆದಿದೆ ಎಂದು ವಿದ್ಯಾರ್ಥಿಗೆ ಬ್ಯಾಂಕ್ ಮಾಹಿತಿ ನೀಡಿದ್ದು, ನಂತರ ವಿದ್ಯಾರ್ಥಿಯ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಈ ಘಟನೆ ಬಗ್ಗೆ ವಿದ್ಯಾರ್ಥಿ ತಕ್ಷಣ ಬೆಂಗಳೂರು ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.