2026-04-24 12:19:40

Fraud involving selling wheat flour as slim powder exposed|ಗೋಧಿ ಹಿಟ್ಟನ್ನೇ ‘ಸ್ಲಿಂ ಪೌಡರ್’ ಎಂದು ಮಾರಾಟ ದಂಧೆ ಬಯಲು|Speed News Kannada

Fraud involving selling wheat flour as slim powder exposed|ಗೋಧಿ ಹಿಟ್ಟನ್ನೇ ‘ಸ್ಲಿಂ ಪೌಡರ್’ ಎಂದು ಮಾರಾಟ ದಂಧೆ ಬಯಲು|Speed News Kannada

ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ನಕಲಿ ಆಯುರ್ವೇದ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ‘RK ಟ್ರೇಡರ್ಸ್’ ಹೆಸರಿನಲ್ಲಿ ನಕಲಿ ತೂಕ ಇಳಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ದಂಧೆ ಬೆಳಕಿಗೆ ಬಂದಿದೆ.

 

ಸಂಸ್ಥೆಯೊಂದರ ಮಾಲಕರು ತಮ್ಮ ಟ್ರೇಡ್‌ಮಾರ್ಕ್ ದುರುಪಯೋಗವಾಗಿದೆ ಎಂದು 2025ರ ಆಗಸ್ಟ್ 14ರಂದು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು. ಮಾರ್ಚ್ 27ರಂದು ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ದೊಡ್ಡ ಪ್ರಮಾಣದ ನಕಲಿ ಆಯುರ್ವೇದ ಟ್ಯಾಬ್ಲೆಟ್‌ಗಳು, ಕಾಸ್ಮೆಟಿಕ್ ಕ್ರೀಮ್‌ಗಳು ಹಾಗೂ ಪೌಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.


ಯಾವುದೇ ಅನುಮತಿ ಇಲ್ಲದೆ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಗೋಧಿ ಹಿಟ್ಟನ್ನೇ ‘ಸ್ಲಿಂ ಪೌಡರ್’ ಎಂದು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬ ಸಂಗತಿ ಬೆಚ್ಚಿಬೀಳಿಸುವಂತಿದೆ.ಪ್ರಮುಖ ಆರೋಪಿ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ, ಕಳೆದ ಒಂದೂವರೆ ವರ್ಷಗಳಿಂದ RK ಟ್ರೇಡರ್ಸ್, MK ಟ್ರೇಡರ್ಸ್ ಮತ್ತು MHK ಟ್ರೇಡರ್ಸ್ ಎಂಬ ವಿವಿಧ ಹೆಸರಿನಲ್ಲಿ ಈ ದಂಧೆ ನಡೆಸಲಾಗುತ್ತಿತ್ತು.


ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತಂಡ, 56 ವರ್ಷದ ರಾಜೀವ್ ಖನ್ನಾನನ್ನು ಮಾರ್ಚ್ 28ರಂದು ದೆಹಲಿಯಲ್ಲಿ ಬಂಧಿಸಿದೆ.ಬಂಧಿತನನ್ನು ಕರ್ನಾಟಕಕ್ಕೆ ಕರೆತಂದು ಶಿರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಗ್ಯಕ್ಕೆ ಹಾನಿಕರವಾಗಬಹುದಾದ ನಕಲಿ ಉತ್ಪನ್ನಗಳ ವಿರುದ್ಧ ಪೊಲೀಸರು ಮುಂದುವರೆದ ಕ್ರಮ ಕೈಗೊಳ್ಳುತ್ತಿದ್ದು, ಜನರು ಎಚ್ಚರಿಕೆಯಿಂದ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.