2026-06-25 02:35:16

Four die after consuming adulterated milk | ಕಲಬೆರೆಕೆ ಹಾಲು ಸೇವಿಸಿ ನಾಲ್ವರ ಸಾ*ವು ಓರ್ವನ ಬಂಧನ | Speed News Kannada

Four die after consuming adulterated milk | ಕಲಬೆರೆಕೆ ಹಾಲು ಸೇವಿಸಿ ನಾಲ್ವರ ಸಾ*ವು ಓರ್ವನ ಬಂಧನ | Speed News Kannada

ಆಂಧ್ರಪ್ರದೇಶದ ರಾಜಮಹೇಂದ್ರವರಂ ನಗರದಲ್ಲಿ ಕಲಬೆರಕೆ ಹಾಲು ಸೇವಿಸಿದ ಪರಿಣಾಮ ನಾಲ್ವರು ಮೃತಪಟ್ಟಿರುವ (Crime) ಘಟನೆ ಬೆಳಕಿಗೆ ಬಂದಿದೆ. ರಾಜಮಹೇಂದ್ರವರಂನಲ್ಲಿ ಸ್ಥಳೀಯ ಮಾರಾಟಗಾರರೊಬ್ಬರು ಸರಬರಾಜು ಮಾಡಿದ ಹಾಲನ್ನು ಎಲ್ಲರು ಸೇವಿಸಿದ್ದಾರೆ.
ಈ ವೇಳೆ ಹಾಲು ಕಲುಷಿತಗೊಂಡಿರಬಹುದು, ಇದು ಗ್ರಾಹಕರಲ್ಲಿ ಅನುರಿಯಾ ಮತ್ತು ತೀವ್ರ ಮೂತ್ರಪಿಂಡದ ತೊಂದರೆಗಳ ಲಕ್ಷಣಗಳು ಕಂಡು ಬಂದಿದೆ.
ಆರೋಗ್ಯ ಅಧಿಕಾರಿಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ, ಅನೇಕ ಮಂದಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ವೈ. ಶ್ರೀಕಾಂತ್ ತಿಳಿಸಿದ್ದಾರೆ.
73 ಮಾದರಿಗಳ ಸಂಗ್ರಹ
ಕಲುಷಿತ ಅಂಶ ಮಿಶ್ರಿತ ಹಾಲು ಮಾರಾಟ ಮಾಡಿದ ಹಾಲು ಮಾರಾಟಗಾರನನ್ನು ಬಂಧಿಸಲಾಗಿದೆ. ಆಹಾರ ಸುರಕ್ಷತಾ ತಂಡಗಳು ಸಂತ್ರಸ್ತ ಕುಟುಂಬಗಳಿಂದ ಹಾಲು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಿವೆ. ಅಷ್ಟೇ ಅಲ್ಲದೆ ಮನೆ ಮನೆಗೆ ಸಮೀಕ್ಷೆ ನಡೆಸಿ 42 ಜಾನುವಾರು ಮಾದರಿಗಳೊಂದಿಗೆ ಒಟ್ಟು 73 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು ಈ ಬಗ್ಗೆ ಸಿಎಂ ಚಂದ್ರ ಬಾಬು ನಾಯ್ಡು ಪರಿಸ್ಥಿತಿಯನ್ನು ಪರಿಶೀಲಿಸಿ, ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಹಾಗೂ ಕಲಬೆರಕೆ ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.ಜಗನ್ ಮೋಹನ್ ರೆಡ್ಡಿ ಆಕ್ರೋಶ ಈ ಘಟನೆಯ ಬಗ್ಗೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ತೀವ್ರ ಆಘಾತ ವ್ಯಕ್ತಪಡಿಸಿ, ಆಹಾರ ಸುರಕ್ಷತಾ ಜಾರಿಗೆ ಸಂಬಂಧಿಸಿದ ನಿರ್ಲಕ್ಷ್ಯವೇ ಸಾರ್ವಜನಿಕ ಜೀವಕ್ಕೆ ಅಪಾಯ ತಂದಿದೆ ಎಂದು ಆರೋಪಿಸಿದ್ದಾರೆ. ಕಲಬೆರಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತಜ್ಞರ ವರದಿ ನಿರೀಕ್ಷೆ
ಆರೋಗ್ಯ ತಂಡಗಳು ಆಸ್ಪತ್ರೆಗಳಲ್ಲಿ ರೋಗಿಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳ ನಿಖರ ಕಾರಣ ತಿಳಿಯಲು ಪ್ರಯೋಗಾಲಯ ವರದಿಗಾಗಿ ನಿರೀಕ್ಷಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.