2026-04-23 09:20:37

Forest Minister imposes strict rules for trekkers | ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್ ವಿಧಿಸಿದ ಅರಣ್ಯ ಸಚಿವ | Speed news kannada

Forest Minister imposes strict rules for trekkers | ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್ ವಿಧಿಸಿದ ಅರಣ್ಯ ಸಚಿವ | Speed news kannada

ರಾಜ್ಯದಲ್ಲಿ ಚಾರಣಕ್ಕೆ ತೆರಳಿ ಹಲವಾರು ಅಪಘಾತಗಳು ಆಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿ ಎಸ್‌ಒಪಿ ಬಿಡುಗಡೆ ಮಾಡಿ ಮಹತ್ವದ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಚಾರಣಗಳ ಹೊಸ ನಿಯಮಗಳ ಪ್ರಕಾರ, ಚಾರಣಿಗರು ಆನ್‌ಲೈನ್ ಮೂಲಕವೇ ಬುಕ್ಕಿಂಗ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಟ್ರೆಕಿಂಗ್ ಹೋಗುವವರ ಮೊಬೈಲ್‌ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಕೆ ಮಾಡಲಾಗುತ್ತದೆ. ಜೊತೆಗೆ ಗೈಡ್‌ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ ಎಂದಿದ್ದಾರೆ. ಪ್ರತಿ ಸ್ಥಳದ ಕ್ಯಾರಿಂಗ್ ಕೆಪಾಸಿಟಿಯನ್ನು ನಿಯಂತ್ರಿಸಲಾಗಿದ್ದು, ಒಮ್ಮೆ 150 ಮಂದಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ಬಳಿಕವೇ ಮತ್ತೊಂದು ತಂಡವನ್ನು ಕಳುಹಿಸಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿರು ಖಂಡ್ರೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.