ನವದೆಹಲಿ, ಮಾ.18 - ನೈಋತ್ಯ ದೆಹಲಿಯ ಪಾಲಂ ಪ್ರದೇಶದ ಬಹುಮಹಡಿ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದಾರೆ ಪ್ರವೇಶ್ (33), ಕಮಲ್, (39), ಆಶು (35) ಲಾಡೋ (70), ಹಿಮಾಂಶಿ (22), ದೀಪಿಕಾ (28) ಮತ್ತು 15, 6 ಮತ್ತು 3 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕಿಯರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಅವರಲ್ಲಿ ಇಬ್ಬರು ಪಾಲಂ ಮೆಟ್ರೋ ನಿಲ್ದಾಣದ ಬಳಿಯ ರಾಮ್ ಚೌಕ್ ಮಾರುಕಟ್ಟೆ ಸಮೀಪ ಈ ದುರಂತ ನಡೆದಿದ್ದು ಬೆಂಕಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ಕಟ್ಟಡದಿಂದ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ಅಂತಸ್ತಿನ ಕಟ್ಟಡವು ನೆಲ ಮತ್ತು ಮೊದಲ ಮಹಡಿಯಲ್ಲಿ ಬಟ್ಟೆ ಮತ್ತು ಸೌಂದರ್ಯವರ್ಧಕ ಶೋ ರೂಂ ಅನ್ನು ಹೊಂದಿತ್ತು, ಆದರೆ ಶೋ ರೂಂನ ಮಾಲೀಕ ರಾಜೇಂದರ್ ಕಶ್ಯಪ್ ಅವರ ಕುಟುಂಬವು ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಾಸಿಸುತ್ತಿತ್ತು. ಬೆಂಕಿಯ ಬಗ್ಗೆ ಬೆಳಿಗ್ಗೆ 7:04 ಕ್ಕೆ ಪಾಲಂ ಗ್ರಾಮ ಪೊಲೀಸ್ ಠಾಣೆಗೆ ಮಾಹಿತಿ ಬಂದಿದ್ದು, ನಂತರ ತಂಡಗಳು ಸ್ಥಳಕ್ಕೆ ಧಾವಿಸಿದವು. ಕಟ್ಟಡದಿಂದ ರಕ್ಷಿಸಲ್ಪಟ್ಟ ಜನರಲ್ಲಿ ಒಂಬತ್ತು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. 32 ವರ್ಷದ ಅನಿಲ್ ಮತ್ತು ಎರಡು ವರ್ಷದ ಒಬ್ಬ ಬಾಲಕಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಸಚಿನ್ (29) ಶೇ. 25 ರಷ್ಟು ಸುಟ್ಟ ಗಾಯಗಳಿಗೆ ಸಫರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೃಹತ್ ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಸುಮಾರು 30 ಅಗ್ನಿಶಾಮಕ ದಳದ ವಾಹನಗಳು ಮತ್ತು 11 ಆಂಬ್ಯುಲೆನ್ಸ್ ಗಳನ್ನು ಪೊಲೀಸರು, ಬಿಎಸ್‌ಇಎಸ್, ವಾಯುಪಡೆಯ ಪೊಲೀಸರು ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ಸೇವೆಗೆ ನಿಯೋಜಿಸಲಾಗಿದೆ.
ಘಟನೆಯ ದೃಶ್ಯಗಳಲ್ಲಿ ದಟ್ಟಣೆಯ ಮಾರುಕಟ್ಟೆ ಪ್ರದೇಶದಲ್ಲಿ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಹೋರಾಡುತ್ತಿದ್ದಂತೆ ಕಟ್ಟಡದಿಂದ ದಟ್ಟವಾದ ಕಪ್ಪು ಹೊಗೆ ಹೊರಬಂದು ಆಕಾಶಕ್ಕೆ ಏರುತ್ತಿರುವುದನ್ನು ತೋರಿಸಲಾಗಿದೆ, ಬೆಂಕಿ ಜ್ವಾಲೆ ಕೆಲವು ಭಾಗಗಳನ್ನು ಆವರಿಸಿವೆ.ಅಗ್ನಿಶಾಮಕ ದಳದವರು ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದರು, ಒಳಗೆ ಸಿಲುಕಿರುವವರನ್ನು ಸ್ಥಳಾಂತರಿಸಲು ಕಿರಿದಾದ ಓಣಿಯಲ್ಲಿ ಮತ್ತು ಹೊಗೆಯಿಂದ ತುಂಬಿದ ಒಳಾಂಗಣಗಳ ಮೂಲಕ ಸಂಚರಿಸಬೇಕಾಯಿತು ಎಂದಿದ್ದಾರೆ. ಬೆಂಕಿಯನ್ನು ನಂದಿಸಲಾಗಿದೆ ಈ ಪ್ರದೇಶವನ್ನು ಸುತ್ತುವರೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ. ಬೆಂಕಿಯ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ, ಮಾ.18 - ನೈಋತ್ಯ ದೆಹಲಿಯ ಪಾಲಂ ಪ್ರದೇಶದ ಬಹುಮಹಡಿ ವಸತಿ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದಾರೆ ಪ್ರವೇಶ್ (33), ಕಮಲ್, (39), ಆಶು (35) ಲಾಡೋ (70), ಹಿಮಾಂಶಿ (22), ದೀಪಿಕಾ (28) ಮತ್ತು 15, 6 ಮತ್ತು 3 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕಿಯರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ.