ನವದೆಹಲಿಯಲ್ಲಿ ಇಂದು ಭಾನುವಾರ ಮುಂಜಾನೆ ನಡೆಯಬೇಕಿದ್ದ ಭಾರಿ ದುರಂತವೊಂದು ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ದೆಹಲಿಯಿಂದ ಜ್ಯೂರಿಚ್‌ಗೆ ಹೊರಟಿದ್ದ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (LX147) ವಿಮಾನವು ಭಾನುವಾರ ಮುಂಜಾನೆ ರನ್‌ವೇಯಲ್ಲಿ ಓಡುತ್ತಿದ್ದಾಗ ತಾಂತ್ರಿಕ ಸಂಕಷ್ಟಕ್ಕೆ ಸಿಲುಕಿತು. ಎಂಜಿನ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು ರನ್‌ವೇ 28/10 ರಲ್ಲಿ ಜ್ಯೂರಿಚ್‌ಗೆ ಹಾರಲು ವೇಗವನ್ನು ಹೆಚ್ಚಿಸುತ್ತಿದ್ದಾಗ, ಪೈಲಟ್‌ಗಳು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಪತ್ತೆಹಚ್ಚಿದರು. ವಿಮಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪೈಲಟ್‌ಗಳು, ಒಂದು ಕ್ಷಣವೂ ತಡಮಾಡದೆ ಟೇಕ್ ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ವಿಮಾನವನ್ನು ರನ್‌ವೇಯಲ್ಲೇ ನಿಲ್ಲಿಸಿದರು. ಪೈಲಟ್‌ಗಳ ಈ ಕ್ಷಿಪ್ರ ನಿರ್ಧಾರದಿಂದಾಗಿ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ. ವಿಮಾನದಲಲಿ 228 ಪ್ರಯಾಣಿಕರು ಇದ್ದು, ತುರ್ತು ಸ್ಲೈಡ್ ಬಳಸಿ ಕೆಲಗಿಳಿಸುವಾಗ ಆರು ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿವೆ.