2026-03-07 05:55:00

Family left on the streets with 3 month old baby | ರಾಜ್ಯದಲ್ಲಿ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ 3 ತಿಂಗಳ ಹಸುಗೂಸ ಸಮೇತ ಬೀದಿಗೆ ಬಿದ್ದ ಕುಟುಂಬ | Speed News Kannada

Family left on the streets with 3 month old baby | ರಾಜ್ಯದಲ್ಲಿ ನಿಲ್ಲದ ಫೈನಾನ್ಸ್ ಕಂಪನಿಗಳ ಕಿರುಕುಳ 3 ತಿಂಗಳ ಹಸುಗೂಸ ಸಮೇತ ಬೀದಿಗೆ ಬಿದ್ದ ಕುಟುಂಬ | Speed News Kannada

ಬೆಳಗಾವಿ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಬೆಳಗಾವಿಯಲ್ಲಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಕುಟುಂಬವೊಂದು ಬೀದಿಗೆ ಬಿದ್ದಿದೆ. ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿ ಮನೆಯನ್ನು ಜಪ್ತಿ ಮಾಡಿದೆ. ಹೀಗಾಗಿ 3 ತಿಂಗಳ ಹಸುಗೂಸು ಸಮೇತ ಬೀದಿಗೆ ಬಿದ್ದಿದೆ. ಸಾಲ ಕಟ್ಟಿಲ್ಲವೆಂದು ಫೈನಾನ್ಸ್ ಸಿಬ್ಬಂದಿ ಮನೆಯನ್ನು ಸೀಜ್ ಮಾಡಿದ್ದಾರೆ.
ರಾಯಭಾಗ ತಾಲೂಕಿನ ಅಲಕನೂರ ಗ್ರಾಮದಲ್ಲಿ ಫೈನಾನ್ಸ್ ಕಂಪನಿ ಸಿಬ್ಬಂದಿಗಳು ಮನೆ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಸಾಮಾಗ್ರಿಯನ್ನೂ ತೆಗೆದುಕೊಳ್ಳಲು ಬಿಡದೇ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ಸೀಸಾದ 7 ಲಕ್ಷ ರೂ. ಸಾಲ ಬಾಕಿ ಇತ್ತು, ಕಂತು ಕಟ್ಟಿಲ್ಲ ಎಂದು ಮನೆ ಸೀಜ್ ಮಾಡಲಾಗಿದೆ. ಹಣ ಕಟೀವಿ ಸಮಯಾವಕಾಶ ಕೊಡಿ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.