2026-06-08 04:35:35

False tooth falls out on beauty pageant stage | ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಕಳಚಿಬಿದ್ದ ಕೃತಕ ಹಲ್ಲು ಮಿಸ್ ಗ್ರಾಂಡ್ ಥೈಲ್ಯಾಂಡ್ ಸ್ಪರ್ಧಿಯ ವಿಡಿಯೋ ವೈರಲ್ | Speed News Kannada

False tooth falls out on beauty pageant stage | ಸೌಂದರ್ಯ ಸ್ಪರ್ಧೆಯ ವೇದಿಕೆಯಲ್ಲೇ ಕಳಚಿಬಿದ್ದ ಕೃತಕ ಹಲ್ಲು ಮಿಸ್ ಗ್ರಾಂಡ್ ಥೈಲ್ಯಾಂಡ್ ಸ್ಪರ್ಧಿಯ ವಿಡಿಯೋ ವೈರಲ್ | Speed News Kannada

ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆಯ ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದ ಸುಂದರಿಯೊಬ್ಬಳಿಗೆ ಅನಿರೀಕ್ಷಿತ ಘಟನೆಯೊಂದು ಭಾರಿ ಮುಜುಗರ ಉಂಟುಮಾಡಿದೆ. 'ಮಿಸ್ ಗ್ರಾಂಡ್ ಥೈಲ್ಯಾಂಡ್ 2026' ಸ್ಪರ್ಧೆಯ ವೇದಿಕೆಯಲ್ಲೇ ಸ್ಪರ್ಧಿಯೊಬ್ಬರ ಕೃತಕ ಹಲ್ಲು ಕಳಚಿ ಬಿದ್ದಿದ್ದು, ಈ ವಿಡಿಯೋ ಈಗ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಸ್ಪರ್ಧೆಯ ಪ್ರಮುಖ ಸುತ್ತಿನಲ್ಲಿ ಸುಂದರವಾದ ಉಡುಗೆ ತೊಟ್ಟು, ಮುಗುಲ್ನಗುತ್ತಾ ಕ್ಯಾಮರಾ ಮುಂದೆ ಪೋಸ್ ನೀಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಪರ್ಧಿ ಜೋರಾಗಿ ನಗುತ್ತಿದ್ದಂತೆಯೇ ಅವರ ಬಾಯಲ್ಲಿದ್ದ ಕೃತಕ ಹಲ್ಲುಗಳು ಹೊರಬಂದಿವೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಕೈಯಿಂದ ಅದನ್ನು ಮರೆಮಾಚಲು ಪ್ರಯತ್ನಿಸಿದರೂ, ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ನೆಟ್ಟಿಗರು ಇದನ್ನು "ಅತ್ಯಂತ ಮುಜುಗುರದ ಕ್ಷಣ" ಎಂದು ಕರೆಯುತ್ತಿದ್ದಾರೆ.ಇಷ್ಟೊಂದು ದೊಡ್ಡ ಅವಾಂತರ ನಡೆದರೂ ಆಕೆ ಎದೆಗುಂದದೆ, ತಕ್ಷಣ ಪರಿಸ್ಥಿತಿಯನ್ನು ನಿಭಾಯಿಸಿ ನಗುತ್ತಲೇ ಸ್ಪರ್ಧೆಯನ್ನು ಮುಂದುವರಿಸಿದ್ದು ಕೆಲವರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದನ್ನು ನೋಡಿ ನಗುತ್ತಿದ್ದರೆ, ಇನ್ನೂ ಕೆಲವರು "ಇದು ಯಾರಿಗಾದರೂ ಸಂಭವಿಸಬಹುದಾದ ಮಾನವ ಸಹಜ ತಪ್ಪು. ಆಕೆಯನ್ನು ನೋಡಿ ನಗಬೇಡಿ" ಎಂದು ಬೆಂಬಲ ಸೂಚಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.