2026-06-08 01:25:51

Everything is traditional at Rashmika Vijay Deverakondas wedding | ರಶ್ಮಿಕಾ ವಿಜಯ್ ದೇವರಕೊಂಡ ಮದುವೆಯಲ್ಲಿ ಎಲ್ಲವೂ ಟ್ರೆಡಿಷನಲ್! ಟ್ರೆಡಿಷನಲ್ | Speed News Kannada

Everything is traditional at Rashmika Vijay Deverakondas wedding | ರಶ್ಮಿಕಾ ವಿಜಯ್ ದೇವರಕೊಂಡ ಮದುವೆಯಲ್ಲಿ ಎಲ್ಲವೂ ಟ್ರೆಡಿಷನಲ್! ಟ್ರೆಡಿಷನಲ್ | Speed News Kannada

ಉದಯಪುರ: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಜೋಡಿ ಈಗಾಗಲೇ ರಾಜಸ್ಥಾನದ ಉದಯಪುರದಲ್ಲಿದ್ದು ಸಿದ್ದತೆಯಲ್ಲಿ ತೊಡಗಿಸಿಕೊಂಡಿದೆ. 
ವಿಜಯ್-ರಶ್ಮಿಕಾ ಮದುವೆಗೆ ಆಗಮಿಸುವ ಅತಿಥಿಗಳಿಗೆ ಬಾಳೆ ಎಲೆಯ ಮೇಲೆ ಊಟ ಬಡಿಸಲಾಗುತ್ತದೆ. ಬಾಳೆ ಎಲೆ ಊಟ ದಕ್ಷಿಣ ಭಾರತದ ಸಂಪ್ರದಾಯವೂ ಹೌದು. ಊಟದ ಜತೆಗೆ  ಎಳನೀರು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಕಾರಣವಿದೆ.
ಬಾಳೆ ಎಲೆ  ಊಟ ಸಮೃದ್ಧಿ ಮತ್ತು ಶುಭಾರಂಭವನ್ನು ಸೂಚಿಸುತ್ತದೆ. ಹಾಗೆಯೇ ಎಳನೀರನ್ನು ಶುದ್ಧತೆ ಮತ್ತು ಆತಿಥ್ಯಕ್ಕೆ ಬಳಸಲಾಗುತ್ತದೆ. 
ಫೆಬ್ರವರಿ 22ರಂದು ಜೋಡಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಮದುವೆಯ ಘೋಷಣೆ ಮಾಡಿದ್ದಾರೆ. 'ಪ್ರಿಯವಾದವರೇ, ನಾವು ಯಾವ ಕೆಲಸ ಮಾಡೋದಕ್ಕೂ ಮುನ್ನ, ನೀವು ನಮ್ಮ ಜೊತೆ ಇದ್ದೀರಿ. ನೀವು ನಮಗೆ 'ವಿರೋಷ್' ಎಂದು ಹೆಸರಿಟ್ಟಿದ್ದೀರಿ. ಆದ್ದರಿಂದ, ನಾವು ನಮ್ಮ ಮದುವೆಗೆ 'ದಿ ವೆಡ್ಡಿಂಗ್ ಆಫ್ ವಿರೋಷ್' ಎಂದು ಹೆಸರಿಡುತ್ತಿದ್ದೇವೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ-24 ರಂದು ಮೆಹಂದಿ ಶಾಸ್ತ್ರ, ಫೆಬ್ರವರಿ-25 ರಂದು ಹಳದಿ ಶಾಸ್ತ್ರ ನಡೆಯಲಿದೆ ಎಂದು ತಿಳಿದು ಬಂದಿದೆ.  ಫೆಬ್ರವರಿ-26 ರಂದು ಮಾಂಗಲ್ಯಧಾರಣೆ ನಡೆಯಲಿದೆ. ಮದುವೆಗೆ ಸ್ಟಾರ್‌ ನಟರು ಮತ್ತು  ಕೆಲವೇ ರಾಜಕಾರಣಿಗಳನ್ನು ಅಹ್ವಾನಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.