2026-06-08 01:24:33

Entry to Nandi Hills is closed | ವ್ಯಾಲಂಟೈನ್ಸ್‌ ಡೇಗೆ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಕಾರಣ ಏನು ಗೊತ್ತೇ | Speed News Kannada

Entry to Nandi Hills is closed | ವ್ಯಾಲಂಟೈನ್ಸ್‌ ಡೇಗೆ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಕಾರಣ ಏನು ಗೊತ್ತೇ | Speed News Kannada

ಚಿಕ್ಕಬಳ್ಳಾಪುರ: ವ್ಯಾಲಂಟೈನ್ಸ್‌ ಡೇಗೆ ನಂದಿಬೆಟ್ಟಕ್ಕೆ ಹೋಗುವ ಪ್ಲಾನ್‌ ಇದ್ದರೆ ಮರೆತುಬಿಡಿ! ನಾಳೆ  ಫೆ.14 ರಂದು ನಂದಿಬೆಟ್ಟಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ಉಪ ಆಯುಕ್ತ ಜಿ ಪ್ರಭು ಮಾತನಾಡಿ  ಈ ಪ್ರವಾಸಿ ತಾಣದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಈ ಹಿಂದೆ ಪ್ರೇಮಿಗಳ ದಿನದಂದು ಇಲ್ಲಿ ಆತ್ಮಹತ್ಯೆಗಳು ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಹೊಸ ವರ್ಷದ ದಿನದಂದೂ ನಂದಿ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಪ್ರೇಮಿಗಳ ದಿನದಂದು ಇಲ್ಲಿ ಉಂಟಾಗುವ ಅವ್ಯವಸ್ಥೆಯನ್ನು ತಪ್ಪಿಸಲು ಪ್ರವೇಶ ನಿಷೇಧ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ  ವಾರಾಂತ್ಯದ ದಿನಗಳಲ್ಲಿ, ಸುಮಾರು 18,000 ಪ್ರವಾಸಿಗರು ನಂದಿ ಬೆಟ್ಟಕ್ಕೆ ಆಗಮಿಸುತ್ತಾರೆ. ಅಂದಾಜು 3,000 ದ್ವಿಚಕ್ರ ವಾಹನಗಳು ಮತ್ತು 1,500 ಕರುಗಳು ಆಗಮಿಸುತ್ತವೆ. ಒಂದೇ ಸಂಪರ್ಕ ರಸ್ತೆ ಇರುವುದರಿಂದ, ವಾರಾಂತ್ಯದ  ದಿನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ವಾರದ ದಿನಗಳಲ್ಲೂ ಪ್ರವಾಸಿಗರಿಗೇನೂ ಕೊರತೆ ಇಲ್ಲ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.