2026-04-23 04:47:18

Emerging Markets sectors Mark Mobius passes away | ಎಮರ್ಜಿಂಗ್ ಮಾರ್ಕೆಟ್ಸ್ ಕ್ಷೇತ್ರದ ಮಾರ್ಕ್ ಮೋಬಿಯಸ್ ನಿಧನ | Speed news kannada

Emerging Markets sectors Mark Mobius passes away | ಎಮರ್ಜಿಂಗ್ ಮಾರ್ಕೆಟ್ಸ್ ಕ್ಷೇತ್ರದ ಮಾರ್ಕ್ ಮೋಬಿಯಸ್ ನಿಧನ | Speed news kannada

ಖ್ಯಾತ ಹೂಡಿಕೆದಾರ ಮತ್ತು ‘ಎಮರ್ಜಿಂಗ್ ಮಾರ್ಕೆಟ್ಸ್’ (ಉದಯೋನ್ಮುಖ ಮಾರುಕಟ್ಟೆ) ಕ್ಷೇತ್ರದ ಪಿತಾಮಹ ಎಂದು ಕರೆಯಲ್ಪಡುವ ಮಾರ್ಕ್ ಮೋಬಿಯಸ್ (89) ಅವರು ಏಪ್ರಿಲ್ 15, ಬುಧವಾರದಂದು ಸಿಂಗಾಪುರದಲ್ಲಿ ನಿಧನರಾಗಿದ್ದಾರೆ. ಅವರ ನಿಧನವನ್ನು ಅವರ ಹೂಡಿಕೆ ಸಂಸ್ಥೆಯಾದ ‘ಮೋಬಿಯಸ್ ಇನ್ವೆಸ್ಟ್‌ಮೆಂಟ್ಸ್’ ಅಧಿಕೃತವಾಗಿ ದೃಢಪಡಿಸಿದೆ. ಭಾರತದ ಮಾರುಕಟ್ಟೆ ಮತ್ತು ಆರ್ಥಿಕತೆಯ ಸಾಮರ್ಥ್ಯದ ಬಗ್ಗೆ ಅತಿಹೆಚ್ಚು ನಂಬಿಕೆ ಇರಿಸಿದ ಕೆಲ ಜಾಗತಿಕ ಹೂಡಿಕೆದಾರರಲ್ಲಿ ಮೋಬಿಯಸ್ ಕೂಡ ಒಬ್ಬರು.

ಸಾಮಾನ್ಯವಾಗಿ ಹೂಡಿಕೆದಾರರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹಣ ಹೂಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಮೋಬಿಯಸ್ ಅವರು ಸಾಹಸಿಯಂತೆ ಈ ದೇಶಗಳಿಗೆ ಭೇಟಿ ನೀಡುತ್ತಿದ್ದರು. ಹೆಚ್ಚಿನವರ ಕಣ್ಣಿಗೆ ಬೀಳದೇ ಇರುತ್ತಿದ್ದ ಮಾರುಕಟ್ಟೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದರು. ಸಿನಿಮಾ ಪಾತ್ರ ‘ಇಂಡಿಯಾನಾ ಜೋನ್ಸ್’ನಂತೆ ಇವರು ಏಷ್ಯಾ, ಆಫ್ರಿಕಾ, ಪೂರ್ವ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದ 100ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮಾರುಕಟ್ಟೆಗಳನ್ನು ಖುದ್ದಾಗಿ ಪರಿಶೀಲಿಸುತ್ತಿದ್ದರು. ಇದರಿಂದಾಗಿ ಇವರನ್ನು ಉದಯೋನ್ಮುಖ ಮಾರುಕಟ್ಟೆಗಳ ಇಂಡಿಯಾನಾ ಜೋನ್ಸ್ ಎಂದು ಬಣ್ಣಿಸಲಾಗುತ್ತಿತ್ತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.