2026-06-08 01:28:58

Elumale | 17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಣಾ ಪ್ರಿಯಾಂಕ ಆಚಾರ್ ಅಭಿನಯದ ಏಳುಮಲೆ ಚಿತ್ರ ಪ್ರದರ್ಶನ | Speed News Kannada

Elumale | 17 ನೇ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಣಾ ಪ್ರಿಯಾಂಕ ಆಚಾರ್ ಅಭಿನಯದ ಏಳುಮಲೆ ಚಿತ್ರ ಪ್ರದರ್ಶನ | Speed News Kannada

ತರುಣ್ ಕಿಶೋರ್ ಸುಧೀರ್ - ಅಟ್ಲಾಂಟಾ ನಾಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ       . 

ತರುಣ್ ಕಿಶೋರ್ ಸುಧೀರ್ ಹಾಗೂ ಅಟ್ಲಾಂಟಾ ನಾಗೇಂದ್ರ ನಿರ್ಮಾಣದ, ಪುನೀತ್ ರಂಗಸ್ವಾಮಿ ನಿರ್ದೇಶನದ ಹಾಗೂ ರಾಣಾ - ಪ್ರಿಯಾಂಕ ಆಚಾರ್ (ಮಹಾನಟಿ ಖ್ಯಾತಿಯ) ನಾಯಕ - ನಾಯಕಿಯಾಗಿ ನಟಿಸಿರುವ ʼಏಳುಮಲೆʼ ಚಿತ್ರ ಈ ಬಾರಿಯ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಮೊದಲು ಮಾತನಾಡಿದ ನಿರ್ದೇಶಕ ಪುನೀತ್‌ ರಂಗಸ್ವಾಮಿ, ʼವಿಭಿನ್ನ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ನೋಡುಗರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯ ಬೆಂಗಳೂರು ಚಿತ್ರೋತ್ಸವಕ್ಕೆ ನಮ್ಮ ಚಿತ್ರ ಆಯ್ಕೆಯಾಗಿರುವುದು ಬಹಳ ಖುಷಿಯಾಗಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ವೀಕ್ಷಕರೇ ಬೇರೆ ಹಾಗೂ ಚಿತ್ರೋತ್ಸವದಲ್ಲಿ ಸಿನಿಮಾ ನೋಡುವ ವೀಕ್ಷಕರೆ ಬೇರೆ ಆಗಿರುತ್ತಾರೆʼ ಎಂದರು.

ರಾಣಾ ಮಾತನಾಡಿ, ʼನಮ್ಮ ಚಿತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆಗೆ ಮನತುಂಬಿ ಬಂದಿತ್ತು. ಈಗ ವಿವಿಧ ರೀತಿಯ ವೀಕ್ಷಕರು ವೀಕ್ಷಿಸುವ ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ʼಏಳುಮಲೆʼ ಪ್ರದರ್ಶನವಾಗಿರುತ್ತಿರುವುದಕ್ಕೆ ಬಹಳ ಖುಷಿಯಾಗಿದೆʼ ಎಂದರು.

ʼಏಳುಮಲೆʼ ಚಿತ್ರಕ್ಕೆ ಜನರು ನೀಡಿದ ಪ್ರಶಂಸೆ ಕಂಡು ಬಹಳ ಸಂತೋಷಪಟ್ಟಿದ್ದೆ ಎಂದ ಪ್ರಿಯಾಂಕಾ ಆಚಾರ್‌, ʼಈಗ ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗುತ್ತಿರುವುದು ಸಂತೋಷವನ್ನು ಇಮ್ಮಡಿಗೊಳಿಸಿದೆʼ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.