2026-04-23 04:51:16

Electricity tariff hike shocks people of the state, increase of 56 paise per unit | ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಶಾಕ್‌, ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ | Speed news kannada

Electricity tariff hike shocks people of the state, increase of 56 paise per unit | ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಶಾಕ್‌, ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ | Speed news kannada

ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ (KERC) ಆದೇಶ ಹೊರಡಿಸಿದೆ. 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿ ಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. ಮೇ  1 ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದೆ. 2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಆದರೆ ಜೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಹುಕ್ಕೇರಿ ಎಸ್ಕಾಂಗಳ ಗ್ರಾಹಕರಿಗೆ ವಿದ್ಯುತ್ ದರ ಕಡಿಮೆಯಾಗಲಿದೆ. ಎಸ್ಕಾಂಗಳಿಂದ ಮರುಪಾವತಿ ಪಡೆಯಲು ಅರ್ಹರಾಗಿರುವ 2024-25 ಸಾಲಿನಲ್ಲಿ ಬಳಕೆ ಮಾಡಿರುವ ವಿದ್ಯುತ್ ಪ್ರಮಾಣದ ಆಧಾರದ ಮೇಲೆ 2026-27ನೇ ಸಾಲಿನಲ್ಲಿ ಮರುಪಾವತಿ ಪಡೆಯುತ್ತಾರೆ. ಈ ಬಾರಿ BESCOM ವ್ಯಾಪ್ತಿಯಲ್ಲಿ ಸುಮಾರು 2,068 ಕೋಟಿ ರೂಪಾಯಿ ಆದಾಯ ಕೊರತೆ ಕಂಡುಬಂದಿದೆ ಎಂದು KERC ತಿಳಿಸಿದೆ. ಈ ಕೊರತೆಯನ್ನು ಸರಿಪಡಿಸಲು ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚುವರಿ ವಸೂಲಿಗೆ ಅನುಮತಿ ನೀಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.