2026-06-08 01:23:23

Electricity shock | ವಿದ್ಯುತ್‌ ಶಾಕ್‌ ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಳ ಸಂಭವ | Speed News Kannada

Electricity shock | ವಿದ್ಯುತ್‌ ಶಾಕ್‌ ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಳ ಸಂಭವ | Speed News Kannada

ಬೆಂಗಳೂರು: ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಾಗಲಿದೆಯೇ? ಆಗುವುದಾದರೆ ಎಷ್ಟು? ಪ್ರತಿ ಯೂನಿಟ್‌ಗೆ 12ರಿಂದ 15 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲು ಕರ್ನಾಟಕ ವಿದ್ಯುತ್‌ ಸುಧಾರಣಾ ಆಯೋಗ( ಕೆಇಆರ್‌ಸಿ) ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ 2025-26, 2026-27 ಮತ್ತು 2027-28ನೇ ಆರ್ಥಿಕ ವರ್ಷಗಳಿಗೆ ದರ ನಿಗದಿ ಮಾಡಲಾಗಿದೆಯಾದರೂ ನಷ್ಟವನ್ನು ಸರಿದೂಗಿಸಲು ಹೆಚ್ಚುವರಿ ದರ ಏರಿಕೆಗೆ ಕೆಇಆರ್‌ಸಿ ಚಿಂತನೆ ನಡೆಸಿದೆ.
ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ನಂತರ 2026ರ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವಿದ್ಯುತ್‌ ದರ ಪ್ರಕಟವಾಗುವ ಸಾಧ್ಯತೆಯಿದೆ. ಕೆಇಆರ್‌ ಸಿ ಗೆ ಸಲ್ಲಿಸಿರುವ ಪ್ರಸ್ತಾವನೆಗಳ ಪ್ರಕಾರ, ಪ್ರತಿ ಯೂನಿಟ್‌ಗೆ ಸರಾಸರಿ 12 ರಿಂದ 15 ಪೈಸೆ ಏರಿಕೆಯಾಗಬಹುದು ಎಂದು ಮೂಲಗಳು ತಿಳಿಸಿವೆ.
ವಿದ್ಯುತ್‌ ಸರಬರಾಜು ಎಸ್ಕಾಂ ಕಂಪನಿಗಳು ಅಂದಾಜು 4,500 ಕೋಟಿ ರೂ. ನಷ್ಟ ಅನುಭವಿಸುತ್ತಿವೆ.  ರಾಜ್ಯದ ಐದು ಎಸ್ಕಾಂಗಳು, 2026-27ನೇ ಸಾಲಿಗೆ ಪ್ರತಿ ಯೂನಿಟ್‌ಗೆ 64 ಪೈಸೆಯಷ್ಟು ದರ ಏರಿಕೆಗೆ ಮನವಿ ಸಲ್ಲಿಸಿವೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.