2026-06-08 02:18:10

Electricity Prices Likely To Rise | ರಾಜ್ಯದ ಜನತೆಗೆ ಮತ್ತೊಂದು ಶಾಕ್ ಮೆಟ್ರೋ ದರ ಏರಿಕೆ ಬೆನ್ನಲ್ಲೆ ವಿದ್ಯುತ್ ದರ ಏರಿಕೆ ಸಾಧ್ಯತೆ! | Speed News Kannada

Electricity Prices Likely To Rise | ರಾಜ್ಯದ ಜನತೆಗೆ ಮತ್ತೊಂದು ಶಾಕ್ ಮೆಟ್ರೋ ದರ ಏರಿಕೆ ಬೆನ್ನಲ್ಲೆ ವಿದ್ಯುತ್ ದರ ಏರಿಕೆ ಸಾಧ್ಯತೆ! | Speed News Kannada

ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ನಾಳೆಯಿಂದ ನಮ್ಮ ಮೆಟ್ರೋ ಪ್ರಯಾಣದ ದರ ಶೇಕಡ 5 ರಷ್ಟು ಏರಿಕೆ ಆಗಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲೆ ರಾಜ್ಯದ ಜನತೆಗೆ ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರದಲ್ಲಿಯೇ ವಿದ್ಯುತ್ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಹೌದು ರಾಜ್ಯದಲ್ಲಿ ವಿದ್ಯುತ್ ಬಿಲ್ ಏರಿಕೆ ಆಗುವ ಸಾಧ್ಯತೆ ಇದೆ ಎಸ್ಕಾಂಗಳ ನಷ್ಟ ಸರಿದೂಗಿಸಲು ದೊರೆ ಏರಿಕೆಗೆ ಚಿಂತನೆ ನಡೆಸಲಾಗುತ್ತಿದೆ. ಆದಾಯ ಕೊರತೆಯಿಂದ ಕರೆಂಟ್ ಬಿಲ್‌ ಹೆಚ್ಚಿಸಲು ಚಿಂತಿಸಲಾಗುತ್ತಿದೆ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದ ಹಳಿಯಲ್ಲಿವೆ. ಆದಾಯ ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ಬೆಸ್ಕಾಂ, ಎಸ್ಕಾಂ ಗಳು ಪಟ್ಟು ಹಿಡಿದಿವೆ.
ಏಪ್ರಿಲ್ 1 ರಿಂದ ವಿದ್ಯುತ್ತರ ಏರಿಕೆ ಆಗುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆಗೆ ಕೆ ಇ ಆರ್ ಸಿ ಅಸ್ತು ಎನ್ನುತ್ತಾ ಎಂದು ಕಾಡುನೋಡೋಕಾಗಿದೆ. ಬೆಸ್ಕಾಂ ಸೇರಿ ಎಸ್ಕಾಂಗಳಿಂದ ಕೆಇಆರ್‌ಸಿಗೆ ವಾರ್ಷಿಕ ವರದಿ ಸಲ್ಲಿಸಿದ್ದು, 2024-25 ರ ಆರ್ಥಿಕ ವರ್ಷದ ರಿಪೋರ್ಟ್ ಸಲ್ಲಿಕೆಯಾಗಿದೆ ಕಾರ್ಯ ನಿರ್ವಹಣಾ ವರದಿಯನ್ನು ಎಸ್ಕಾಂ ಮತ್ತು ಬೆಸ್ಕಾಂ ಗಳು ಸಲ್ಲಿಕೆ ಮಾಡಿವೆ. ಅಂದಾಜು 4500 ಕೋಟಿ ನಷ್ಟದಲ್ಲಿ ಇರುವ ಬಗ್ಗೆ ಎಸ್ಕಾಂ ಮಾಹಿತಿ ನೀಡಿದೆ. ಹಾಗಾಗಿ ನಷ್ಟ ಸರಿದೂಗಿಸಲು ಹೆಚ್ಚುವರಿದರೆ ಏರಿಕೆಗೆ ಚಿಂತನೆ ನಡೆಸಲಾಗುತ್ತಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.