2026-06-08 04:59:44

Elections announced for 37 Rajya Sabha seats | ಶರದ್ ಪವಾರ್ ಅಭಿಷೇಕ್ ಮನುಸಿಂಘ್ವಿ ನಿವೃತ್ತಿ ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ಘೋಷಣೆ | Speed News Kannada

Elections announced for 37 Rajya Sabha seats | ಶರದ್ ಪವಾರ್ ಅಭಿಷೇಕ್ ಮನುಸಿಂಘ್ವಿ ನಿವೃತ್ತಿ ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ಘೋಷಣೆ | Speed News Kannada

ನವದೆಹಲಿ: ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಅಗತ್ಯ ಬಿದ್ದರೆ ಮಾರ್ಚ್‌ 16 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಪ್ರಿಲ್‌ನಲ್ಲಿ 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅಧಿಕಾರವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗವು ದಿನಾಂಕ ಪ್ರಕಟಿಸಿದೆ. ದ್ವೈವಾರ್ಷಿಕ ಚುನಾವಣೆಗಳು ಮಾರ್ಚ್ 16 ರಂದು ನಡೆಯಲಿವೆ. ಫೆಬ್ರವರಿ 26 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮಾರ್ಚ್‌ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.
ಯಾವ ರಾಜ್ಯ ಎಷ್ಟು ಸ್ಥಾನ?
ಮಹಾರಾಷ್ಟ್ರ( 7 ಸ್ಥಾನ); ಒಡಿಶಾ ( 4 ) ;ತಮಿಳುನಾಡು( 6); ತೆಲಂಗಾಣ, ಛತ್ತೀಸ್‌ಗಢ ಮತ್ತು ಹರಿಯಾಣ( ತಲಾ 2 ಸ್ಥಾನ); ಪಶ್ಚಿಮ ಬಂಗಾಳ ( 5); ಅಸ್ಸಾಂ (3);ಹರಿಯಾಣ ( 2); ಬಿಹಾರ(5) ಹಿಮಾಚಲ ಪ್ರದೇಶ (1 ಸ್ಥಾನ)

ನಿವೃತರಾಗುತ್ತಿರುವ ಪ್ರಮುಖರು:
ಶರದ್ ಪವಾರ್ (ಎನ್‌ಸಿಪಿ-ಎಸ್‌ಪಿ), ಅಭಿಷೇಕ್ ಮನುಸಿಂಘ್ವಿ (ಕಾಂಗ್ರೆಸ್), ಸಾಕೇತ್ ಗೋಖಲೆ (ಟಿಎಂಸಿ), ರಾಮದಾಸ್ ಅಠಾವಳೆ (ಆರ್‌ಪಿಐ-ಎ), ಎಂ ತಂಬಿದುರೈ (ಎಐಎಡಿಎಂಕೆ), ತಿರುಚಿ ಶಿವ (ಡಿಎಂಕೆ)

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.