ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಜೂನ್ 20ರಿಂದ ಆರಂಭವಾಗಲಿದೆ. ಒಬ್ಬನೇ ಒಬ್ಬ ಅರ್ಹ ಮತದಾರನೂ ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಎಚ್ಚರಿಕೆಯಿಂದ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಾರೆ.
ಅವರು ಎಸ್ ಐಆರ್ ಕುರಿತು ಮಾಹಿತಿ ಹಂಚಿಕೊಂಡರು. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಒಟ್ಟು 59,050 ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ), 5,905 ಬಿಎಲ್‌ಒ ಮೇಲ್ವಿಚಾರಕರು, 336 ಸಹಾಯಕ ಮತದಾರರ ನೋಂದಣಾಧಿಕಾರಿ, 224 ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಿದರು.
‘ಎಸ್‌ಐಆರ್‌ಗೆ ಪೂರ್ವ ತಯಾರಿಯಾಗಿ ಮತದಾರರ ವಿವರಗಳನ್ನು ಹೋಲಿಸಿ, ಖಚಿತಪಡಿಸಿಕೊಳ್ಳುವ (ಮ್ಯಾಪಿಂಗ್) ಕೆಲಸ ಶೇ 86.46ಷ್ಟು ಪೂರ್ಣಗೊಂಡಿದೆ. 2025ರ ಮತದಾರರ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 5.55 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 4.80 ಕೋಟಿ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿ ಮತ್ತು ಪೋಷಕರ ಮತದಾರರ ಚೀಟಿ ವಿವರಗಳ ಜತೆಗೆ ಹೋಲಿಸಿ ನೋಡಿ ಖಚಿತಪಡಿಸಿಕೊಳ್ಳಲಾಗಿದೆ. ಎಸ್‌ಐಆರ್ ಆರಂಭವಾಗುವರೆಗೂ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಮ್ಯಾಪಿಂಗ್ ಪ್ರಕ್ರಿಯೆಯ ಆಧಾರದಲ್ಲಿ ರಾಜ್ಯದ ಎಲ್ಲ 5.55 ಕೋಟಿ ಮತದಾರರಿಗೂ ಗಣತಿ ನಮೂನೆಗಳನ್ನು (ಎನ್ಯುಮರೇಷನ್ ಅರ್ಜಿ) ಸೃಜಿಸಲಾಗುತ್ತದೆ. ಪ್ರತಿ ಮತದಾರರಿಗಾಗಿ ಎರಡು ಗಣತಿ ನಮೂನೆಗಳಂತೆ, ಒಟ್ಟು ಸುಮಾರು 11 ಕೋಟಿ ನಮೂನೆಗಳನ್ನು ಸೃಜಿಸಲಾಗುತ್ತದೆ. ಮತದಾರರು ಎರಡೂ ನಮೂನೆಗಳನ್ನು ಭರ್ತಿ ಮಾಡಿ, ಒಂದನ್ನು ಬಿಎಲ್‌ಒಗಳಿಗೆ ನೀಡಬೇಕು ಮತ್ತು ಇನ್ನೊಂದನ್ನು ತಮ್ಮ ಬಳಿಯೇ ಇರಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದರೆ, ಈ ಅರ್ಜಿಯ ಆಧಾರದಲ್ಲೇ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದರು.
ಇತರ ರಾಜ್ಯಗಳಲ್ಲಿ ನಡೆದ ಎಸ್‌ಐಆರ್‌ನಲ್ಲಿ ನಿರ್ದಿಷ್ಟ ಧಾರ್ಮಿಕ ಸಮುದಾಯವೊಂದರ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ಆರೋಪ ಕುರಿತು ಉತ್ತರಿಸಿದ ಅವರು ಅಂತಹ ಆರೋಪಗಳಲ್ಲಿ ಹುರುಳಿಲ್ಲ ಎಂದರು.
1. ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ಸರ್ಕಾರಿ ಉದ್ಯಮದ ಕಾಯಂ ಉದ್ಯೋಗಿ/ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಸಂದಾಯ ಪತ್ರ
2.ಭಾರತದಲ್ಲಿ 1987ಕ್ಕೂ ಮೊದಲು ಸರ್ಕಾರ/ಸ್ಥಳೀಯ ಪ್ರಾಧಿಕಾರಗಳು/ಬ್ಯಾಂಕುಗಳು/ಅಂಚೆ ಕಚೇರಿ/ಜೀವ ವಿಮಾ ನಿಗಮ/ಸರ್ಕಾರಿ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ/ ದಸ್ತಾವೇಜು
5. ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯುಲೇಷನ್/ಶೈಕ್ಷಣಿಕ ಪ್ರಮಾಣಪತ್ರ
6. ರಾಜ್ಯ ಸರ್ಕಾರದ ಪ್ರಾಧಿಕಾರಗಳು ನೀಡಿರುವ ಕಾಯಂ ನಿವಾಸಿ ಪ್ರಮಾಣಪತ್ರ
7. ಅರಣ್ಯ ಹಕ್ಕು ಪ್ರಮಾಣಪತ್ರ
8. ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಯಾವುದೇ ಜಾತಿ ಪ್ರಮಾಣಪತ್ರಗಳು
9. ರಾಷ್ಟ್ರೀಯ ಪೌರತ್ವ ನೋಂದಣಿ ಚೀಟಿ (ಯಾವುದೇ ರಾಜ್ಯದಲ್ಲಿ ಇದ್ದರೂ ಮಾನ್ಯ)
10. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆ/ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ
11. ಜಮೀನು/ ಮನೆ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಪ್ರಮಾಣ ಪತ್ರ/ಹಂಚಿಕೆ ಪತ್ರ
12. ಆಧಾರ್: (ಸುಪ್ರೀಂ ಕೋರ್ಟ್‌ನ ನಿರ್ದೇಶನ ಮತ್ತು ಆದೇಶದ ಅನ್ವಯ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರವೇ ಪರಿಗಣಿಸಲಾಗುತ್ತದೆ. ಆಧಾರ್ ಅನ್ನು ಪೌರತ್ವ ಅಥವಾ ನಾಗರಿಕ ಪ್ರಮಾಣಪತ್ರವಾಗಿ ಪರಿಗಣಿಸುವುದಿಲ್ಲ)