ನವದೆಹಲಿ: ಕರ್ನಾಟಕ ಹಾಗೂ ಬಿಹಾರ ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದೆ. ಬಿಹಾರದಲ್ಲಿ ಒಂಬತ್ತು ಮತ್ತು ಕರ್ನಾಟಕದ ಏಳು ಸ್ಥಾನಗಳಲ್ಲಿ ದ್ವೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಜೂನ್ 18ರಂದು ಮತದಾನ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಬಿಹಾರ ಹಾಗೂ ಕರ್ನಾಟಕದ ವಿಧಾನ ಪರಿಷತ್‌ನ 16 ಸದಸ್ಯರ ಅವಧಿಯು ಅನುಕ್ರಮವಾಗಿ ಜೂನ್ 28 ಹಾಗೂ 30ರಂದು ಮುಕ್ತಾಯಗೊಳ್ಳಲಿದೆ.
ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು, ನಸೀರ್ ಅಹ್ಮದ್, ಎಂ.ಟಿ.ಬಿ ನಾಗರಾಜು, ಪ್ರತಾಪ ಸಿಂಹ ನಾಯಕ್ ಕೆ, ತಿಪ್ಪಣ್ಣಪ್ಪ, ಸುನಿಲ್ ವಲ್ಯಾಪುರ ಹಾಗೂ ಬಿ.ಕೆ. ಹರಿಪ್ರಸಾದ್ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.
· ಚುನಾವಣೆ ಅಧಿಸೂಚನೆ: 01 ಜೂನ್ 2026
· ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: 08 ಜೂನ್ 2026
· ನಾಮಪತ್ರ ಪರಿಶೀಲನೆ: 09 ಜೂನ್ 2026
· ನಾಮಪತ್ರ ಹಿಂಪಡೆಯಲು ಅಂತಿಮ ದಿನಾಂಕ: 11 ಜೂನ್ 2026
· ಮತದಾನ: 18 ಜೂನ್ 2026
· ಮತ ಎಣಿಕೆ: 18 ಜೂನ್ 2026