2026-06-08 01:20:20

Ek Din fails at the box office, earns Rs 1 crore on second day|ಏಕ್ ದಿನ್ ಬಾಕ್ಸ್ ಆಫೀಸ್‌ನಲ್ಲಿ ಮಂಕು, ಎರಡನೇ ದಿನ 1 ಕೋಟಿ |Speed News Kannada

Ek Din fails at the box office, earns Rs 1 crore on second day|ಏಕ್ ದಿನ್  ಬಾಕ್ಸ್ ಆಫೀಸ್‌ನಲ್ಲಿ ಮಂಕು, ಎರಡನೇ ದಿನ 1 ಕೋಟಿ |Speed News Kannada

ಬಾಲಿವುಡ್‌ನಲ್ಲಿ ಜುನೈದ್‌ ಖಾನ್‌ ಮತ್ತು ಸಾಯಿ ಪಲ್ಲವಿ ಅಭಿನಯದ ಏಕ್‌ ದಿನ್‌ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಬಿಡುಗಡೆಗೊಂಡ ಮೊದಲ ದಿನದಿಂದಲೇ ನೆಗೆಟಿವ್ ಪ್ರತಿಕ್ರಿಯೆ ಪಡೆದ ಈ ಚಿತ್ರ, ಎರಡನೇ ದಿನವೂ ಚೇತರಿಕೆ ಕಾಣದೆ ಕೇವಲ 1 ಕೋಟಿ ರೂಪಾಯಿ ಗಳಿಸಿದೆ.

ಇನ್ನೊಂದೆಡೆ ರಿತೇಶ್‌ ದೇಶ್‌ಮುಖ್‌ ಅಭಿನಯದ ರಾಜ್‌ ಶಿವಾಜಿ ಹಾಗೂ ಅಕ್ಷಯ್‌ ಕುಮಾರ್‌ ನಟನೆಯ ಭೂತ್‌ ಬಾಂಗ್ಲಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಹಾಲಿವುಡ್‌ನ ದಿ ಡೆವಿಲ್‌ ವೇರ್ಸ್‌ ಪ್ರಾಡಾ 2 ಸಿನಿಮಾವೂ ಸ್ಪರ್ಧೆ ನೀಡುತ್ತಿದೆ.ಏಕ್‌ ದಿನ್‌ ಚಿತ್ರವನ್ನು ಸುನಿಲ್‌ ಪಾಂಡೆ ನಿರ್ದೇಶಿಸಿದ್ದು, ಅಮೀರ್‌ ಖಾನ್‌ ಪ್ರೊಡಕ್ಷನ್‌ ನಿರ್ಮಾಣ ಮಾಡಿದೆ. ಥಾಯ್ ಚಿತ್ರ ಓನ್‌ ಡೇ  ರಿಮೇಕ್ ಆಗಿರುವ ಈ ಸಿನಿಮಾ ಪ್ರೇಮಕಥೆಯನ್ನು ಒಳಗೊಂಡಿದೆ.ಒಟ್ಟಿನಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಈಗ ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ನಷ್ಟ ಎದುರಾಗುವ ಸಾಧ್ಯತೆ ಇದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.