2026-04-23 06:11:15

Ejipur flyover work delayed again|ಈಜಿಪುರ ಫ್ಲೈಓವರ್ ಕಾಮಗಾರಿ ಮತ್ತೆ ವಿಳಂಬ|Speed News Kannada

Ejipur flyover work delayed again|ಈಜಿಪುರ ಫ್ಲೈಓವರ್ ಕಾಮಗಾರಿ ಮತ್ತೆ ವಿಳಂಬ|Speed News Kannada

ಸಿಲಿಕಾನ್ ಸಿಟಿಯ ಅತ್ಯಂತ ಸುದೀರ್ಘ ಕಾಲದ ಕಾಮಗಾರಿ ಎಂಬ ಹಣೆಪಟ್ಟಿ ಹೊತ್ತಿರುವ ಈಜಿಪುರ ಫ್ಲೈಓವರ್ ಬಳಕೆದಾರರಿಗೆ ಮತ್ತೊಂದು ನಿರಾಸೆ ಕಾದಿದೆ. ಜೂನ್ ಒಳಗೆ ಮುಗಿಯಬೇಕಿದ್ದ ಈ ಮೇಲ್ಸೇತುವೆ ಕೆಲಸ ಈಗ ಆಗಸ್ಟ್ ತಿಂಗಳವರೆಗೆ ಮುಂದೂಡಲ್ಪಟ್ಟಿದೆ. 2017ರಲ್ಲಿ ಆರಂಭವಾದ ಈ 2.38 ಕಿಲೋಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ ಹಲವು ಕಾರಣಗಳಿಂದ ಕುಂಟುತ್ತಾ ಸಾಗಿದೆ. ಮೊದಲು ಸಿಂಪ್ಲೆಕ್ಸ್ ಸಂಸ್ಥೆ ಅರ್ಧಕ್ಕೆ ಬಿಟ್ಟಿದ್ದ ಕೆಲಸವನ್ನು ಈಗ ಹೈದರಾಬಾದ್ ಮೂಲದ ಕಂಪನಿ ವಹಿಸಿಕೊಂಡಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಮತ್ತು ಇಂಜಿನಿಯರ್‌ಗಳ ವರ್ಗಾವಣೆ ಸಮಸ್ಯೆಯಿಂದಾಗಿ ಮಾರ್ಚ್ ಗಡುವನ್ನು ಮೀರಿದ್ದ ಕಾಮಗಾರಿ, ಈಗ ಆಗಸ್ಟ್ ವೇಳೆಗೆ ಮುಗಿಯಬಹುದು ಎಂದು ಅಂದಾಜಿಸಲಾಗಿದೆ.

ಒಟ್ಟು 762 ಸೆಗ್ಮೆಂಟ್‌ಗಳ ಪೈಕಿ ಇನ್ನೂ 20 ಸೆಗ್ಮೆಂಟ್‌ಗಳನ್ನು ಅಳವಡಿಸುವುದು ಬಾಕಿ ಇದೆ. ವಿಶೇಷವಾಗಿ ಸೇಂಟ್ ಜಾನ್ಸ್ ಜಂಕ್ಷನ್ ಬಳಿ ಪಿಯರ್ ಕೆಲಸಗಳು ಈಗಷ್ಟೇ ವೇಗ ಪಡೆದುಕೊಳ್ಳುತ್ತಿವೆ ಈ ವಿಳಂಬದ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಣ್ಣಪುಟ್ಟ ಕಾರಣಗಳನ್ನು ನೀಡಿ ಕೆಲಸವನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಫ್ಲೈಓವರ್ ಪೂರ್ಣಗೊಂಡರೆ ಸೋನಿ ವರ್ಲ್ಡ್ ಸಿಗ್ನಲ್ ಸೇರಿದಂತೆ ಕೋರಮಂಗಲದ 7 ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಲಿದ್ದು, ಸುಮಾರು 30 ನಿಮಿಷಗಳ ಪ್ರಯಾಣದ ಅವಧಿ ಉಳಿತಾಯವಾಗಲಿದೆ.ನಗರದ ಪ್ರಮುಖ ಆಯಕಟ್ಟಿನ ಜಾಗದಲ್ಲಿರುವ ಈ ಮೇಲ್ಸೇತುವೆ ಆದಷ್ಟು ಬೇಗ ಸಾರ್ವಜನಿಕ ಸೇವೆಗೆ ಮುಕ್ತವಾಗಲಿ ಎನ್ನುವುದೇ ಬೆಂಗಳೂರು ಜನತೆಯ ಆಶಯ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.