2026-03-07 05:53:33

Drug peddler arrested for selling marijuana | ಕೇರಳ ಪೊಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್‌ ಪೆಡ್ಲರ್ ಬಂಧನ | Speed News Kannada

Drug peddler arrested for selling marijuana | ಕೇರಳ ಪೊಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್‌ ಪೆಡ್ಲರ್ ಬಂಧನ | Speed News Kannada

ಆನೇಕಲ್: ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್‌ ಪೆಡ್ಲರ್ ಒಬ್ಬನನ್ನು ಕೇರಳ ಪೊಲೀಸರು  ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕೇರಳದ ಮಾದಕವಸ್ತು ನಿಗ್ರಹ ದಳದ ಪೊಲೀಸರು ಅಸ್ಸಾಂ ಮೂಲದ ಧೀರೇಶ್ ಕುಟುಮ್ (27) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ  1 ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ‌ ಪೊಲೀಸರಿಂದ ಒಟ್ಟು 9 ಆರೋಪಿಗಳನ್ನು  ಬಂಧಿಸಲಾಗಿದೆ.
ಡೆಲಿವರಿ ಬಾಯ್ ರೀತಿ ಡ್ರಗ್ಸ್ ಸರಬರಾಜು
ಆರೋಪಿ ಧೀರೇಶ್ ತಂಗಿಯ ಪತಿ ನೈಜೀರಿಯಾ ಮೂಲದವ. ಈತ ಅಸ್ಸಾಂಗೆ ಎಂಡಿಎಂಎ ರವಾನಿಸುತ್ತಿದ್ದ. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ ಮತ್ತು ಕರ್ನಾಟಕಕ್ಕೆ ಸಾಗಟ ಮಾಡಲಾಗುತ್ತಿತ್ತು. ಸೆರೆಲಾಕ್ ಪಾಕೆಟ್ಗಳಲ್ಲಿ ಎಂಡಿಎಂಎ ಅಡಗಿಸಿಟ್ಟು  ಆನ್ಲೈನ್ ಫುಡ್ ಡೆಲಿವರಿ ಬಾಯ್ ರೀತಿ ಪೂರೈಕೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದಲ್ಲಿರುವ ಆರೋಪಿ ಮನೆ ಮೇಲೆ ದಾಳಿ ಮಾಡಿದ ಕೇರಳ ಪೊಲೀಸರು ಸೆರೆಲಾಕ್ ಪಾಕೆಟ್ ಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ವಾರದ ಹಿಂದೆಯಷ್ಟೇ  ಕೇರಳದ ಮಲಪುರಂನಲ್ಲಿ ಧೀರೇಶ್ ನ  8 ಸಹಚರರು ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ಅವರು ಧೀರೇಶ್ ಕುಟುಮ್ ಬಗ್ಗೆ ಮಾಹಿತಿ ನೀಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.