2026-06-08 01:30:11

Donald Trump still deserving Nobel Prize | ಈಗಲೂ ಟ್ರಂಪ್ ಅವರಿಗೆ ನೋಬೆಲ್ ಪ್ರಶಸ್ತಿ ನೀಡುವಂತೆ ಒತ್ತಾಯಿಸುತ್ತೀರಾ | Speed News Kannada

Donald Trump still deserving Nobel Prize | ಈಗಲೂ ಟ್ರಂಪ್ ಅವರಿಗೆ ನೋಬೆಲ್ ಪ್ರಶಸ್ತಿ ನೀಡುವಂತೆ ಒತ್ತಾಯಿಸುತ್ತೀರಾ | Speed News Kannada

ಇರಾನ್ ಮೇಲಿನ ಆಕ್ರಮಣದ ನಂತರ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಮತ್ತು 'ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ'ಯ ಅಧ್ಯಕ್ಷ ಸಂಸದ ಬಿಲಾವಲ್ ಭುಟ್ಟೋ ಅವರಿಗೆ ಪಾಕಿಸ್ತಾನಿ ಪತ್ರಕರ್ತರ ಪ್ರಶ್ನೆ
ಇಸ್ಲಾಮಾಬಾದ್ (ಪಾಕಿಸ್ತಾನ) - ಭಾರತವು ಪಾಕಿಸ್ತಾನದ ವಿರುದ್ಧ ಹಮ್ಮಿಕೊಂಡಿದ್ದ 'ಆಪರೇಷನ್ ಸಿಂದೂರ್' ಅನ್ನು ತಾನು ನಿಲ್ಲಿಸಿರುವುದಾಗಿ ಟ್ರಂಪ್ ದಾವೆ ಮಾಡುತ್ತಾ ಬಂದಿದ್ದಾರೆ.
ಅಷ್ಟೇ ಅಲ್ಲದೆ, ಇತರ ಯುದ್ಧಗಳನ್ನು ನಿಲ್ಲಿಸಿ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವುದಾಗಿ ಹೇಳಿಕೊಳ್ಳುವ ಮೂಲಕ ಟ್ರಂಪ್ ಅವರು ತಮಗೆ ನೋಬೆಲ್ ಪ್ರಶಸ್ತಿ ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಇದಕ್ಕೆ ಪಾಕಿಸ್ತಾನವು ಬಹಿರಂಗ ಬೆಂಬಲವನ್ನು ಸೂಚಿಸಿತ್ತು. ಈಗ ಟ್ರಂಪ್ ಅವರು ಇರಾನ್ ಮೇಲೆ ನಡೆಸಿದ ಆಕ್ರಮಣ ಮತ್ತು ಖಮೇನಿ ಅವರ ಹತ್ಯೆಯ ನಂತರ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪತ್ರಕರ್ತರು, ಪ್ರಧಾನಿ ಶಹಬಾಜ್ ಶರೀಫ್ ಅವರ ಸೋದರ ಸೊಸೆ ಹಾಗೂ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಮತ್ತು 'ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ'ಯ ಅಧ್ಯಕ್ಷ ಸಂಸದ ಬಿಲಾವಲ್‌ ಭುಟ್ಟೋ ಅವರಿಗೆ, "ಈಗಲೂ ನೀವು ಟ್ರಂಪ್ ಅವರಿಗೆ ಶಾಂತಿ ನೋಬೆಲ್ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುತ್ತೀರಾ?" ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವುದನ್ನು ಇಬ್ಬರೂ ನಾಯಕರು ತಪ್ಪಿಸಿಕೊಂಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.