2026-05-02 10:44:02

Do you know what shampoo means in Kannada | ಶಾಂಪೂಗೆ ಅಚ್ಚ ಕನ್ನಡದಲ್ಲಿ ಏನಂತಾರೆ ಎಂದು ನಿಮಗೆ ತಿಳಿದಿದೆಯೆ | Speed news kannada

Do you know what shampoo means in Kannada | ಶಾಂಪೂಗೆ ಅಚ್ಚ ಕನ್ನಡದಲ್ಲಿ ಏನಂತಾರೆ ಎಂದು ನಿಮಗೆ ತಿಳಿದಿದೆಯೆ | Speed news kannada

ನಾವು ಪ್ರತಿದಿನ ತಲೆ ಸ್ನಾನಕ್ಕೆ ಬಳಸುವ ಎಂಬ ಪದಕ್ಕೆ ಕನ್ನಡದಲ್ಲಿ 'ನವಿರುಕ' ಎಂಬ ಅರ್ಥಪೂರ್ಣ ಹೆಸರಿದೆ. ಹೌದು, ಕೂದಲನ್ನು ಮೃದುವಾಗಿ ಅಥವಾ ನವಿರಾಗಿ ಮಾಡುವ ದ್ರವ್ಯ ಎಂಬ ಕಾರಣಕ್ಕೆ ಇದಕ್ಕೆ ನವಿರುಕ ಎಂಬ ಹೆಸರು ಬಂದಿದೆ. ಇಂದಿನ ಆಧುನಿಕ ಯುಗದಲ್ಲಿ ಶಾಂಪೂ ಅನ್ನೋದು ವಿದೇಶಿ ಕಂಪನಿಗಳ ಕೊಡುಗೆ ಅಂದುಕೊಂಡರೆ ಅದು ತಪ್ಪು. ಅಸಲಿಗೆ ಈ ಶಾಂಪೂ ಎಂಬ ಪರಿಕಲ್ಪನೆ ಹುಟ್ಟಿದ್ದೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದರ ಇತಿಹಾಸ ಮತ್ತು ಕನ್ನಡ ಪದದ ಹಿಂದಿರೋ ಸ್ವಾರಸ್ಯವನ್ನು ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ. ಕನ್ನಡ ಸಾಹಿತ್ಯ ಮತ್ತು ಭಾಷಾ ಪ್ರಜ್ಞೆಯಲ್ಲಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ನಾಮಕರಣವಿರುತ್ತದೆ. 'ನವಿರು' ಎಂದರೆ ಕೋಮಲವಾದ ಅಥವಾ ಮೃದುವಾದ ಎಂದರ್ಥ. ಕೂದಲನ್ನು ಸ್ವಚ್ಛಗೊಳಿಸಿ ಅದನ್ನು ರೇಷ್ಮೆಯಂತೆ ನವಿರಾಗಿಸುವ ದ್ರವಕ್ಕೆ ನಾವು ನವಿರುಕ ಎಂದು ಕರೆಯಬಹುದು. ಇಂಗ್ಲಿಷ್ ಪದಕ್ಕೆ ನಾವು ಮಾರುಹೋಗಿ ನಮ್ಮ ಭಾಷೆಯ ಇಂತಹ ಸೊಗಸಾದ ಪದಗಳನ್ನು ಮರೆಯುತ್ತಿದ್ದೇವೆ.

ಆದರೆ ಅಪ್ಪಟ ಕನ್ನಡ ಪ್ರೇಮಿಗಳಿಗೆ ನವಿರುಕ ಎಂಬ ಪದ ಕೇಳಿದ ತಕ್ಷಣ ಅದರ ಕೆಲಸವೇನು ಎಂಬುದು ಅರ್ಥವಾಗಿಬಿಡುತ್ತದೆ. ನಮಗೆಲ್ಲಾ ಶಾಂಪೂ ಅಂದ್ರೆ ಪಾಶ್ಚಿಮಾತ್ಯರ ಆವಿಷ್ಕಾರ ಅಂದುಕೊಳ್ಳುವ ಅಭ್ಯಾಸ. ಆದರೆ 'ಶಾಂಪೂ' ಎಂಬ ಪದವೇ ಸಂಸ್ಕೃತದ 'ಚಂಪೂ' ಎಂಬ ಪದದಿಂದ ಬಂದಿದೆ. ಚಂಪೂ ಎಂದರೆ ಮಸಾಜ್ ಮಾಡುವುದು ಅಥವಾ ಒತ್ತೊತ್ತುವುದು ಎಂದರ್ಥ. ಪುರಾತನ ಭಾರತದಲ್ಲಿ ಗಿಡಮೂಲಿಕೆಗಳು, ಸೀಗೆಕಾಯಿ ಮತ್ತು ಅಂಟುವಾಳ ಕಾಯಿಗಳನ್ನು ಬಳಸಿ ತಯಾರಿಸುತ್ತಿದ್ದ ಮಿಶ್ರಣವೇ ಮೊದಲ ಶಾಂಪೂ. ಇದನ್ನೇ ಬ್ರಿಟಿಷರು ಭಾರತದಿಂದ ಯುರೋಪ್‌ಗೆ ಕೊಂಡೊಯ್ದರು. ಅಜ್ಜಿಯ ಕಾಲದಲ್ಲಿ ನವಿರುಕ ಎಂದರೆ ಅದು ಸೀಗೆಕಾಯಿ ಮತ್ತು ಅಂಟುವಾಳವೇ ಆಗಿತ್ತು. ಇವುಗಳಲ್ಲಿ ಸಪೋನಿನ್ ಎಂಬ ನೈಸರ್ಗಿಕ ಕ್ಲೆನ್ಸರ್ ಇರುತ್ತದೆ. ಇದು ಕೂದಲಿಗೆ ಯಾವುದೇ ಹಾನಿ ಮಾಡದೆ ಗಲೀಜನ್ನು ಹೊರಹಾಕುತ್ತದೆ. ಇಂದಿನ ಕೆಮಿಕಲ್ ಶಾಂಪೂಗಳಿಗಿಂತ ಈ ನೈಸರ್ಗಿಕ ನವಿರುಕಗಳು ಕೂದಲಿಗೆ ಆರೋಗ್ಯ ಮತ್ತು ಹೊಳಪನ್ನು ನೀಡುತ್ತಿದ್ದವು. ಇಂದಿಗೂ ಆಯುರ್ವೇದದಲ್ಲಿ ಇವುಗಳಿಗೆ ಮೊದಲ ಸ್ಥಾನವಿದೆ.

ನವಿರುಕ ಎಂಬ ಪದವನ್ನು ಕೇಳಿದಾಗ ನಮಗೆ ಒಂದು ರೀತಿಯ ಅಚ್ಚರಿ ಮೂಡಬಹುದು. ಆದರೆ ಇಂತಹ ಪದಗಳ ಬಳಕೆಯಿಂದ ಭಾಷೆಯ ಸೊಗಡು ಹೆಚ್ಚುತ್ತದೆ. ಪ್ರತಿಯೊಂದು ಇಂಗ್ಲಿಷ್ ವಸ್ತುವಿಗೂ ಕನ್ನಡದಲ್ಲಿ ಪರ್ಯಾಯ ಪದಗಳನ್ನು ಹುಡುಕುವುದು ಮತ್ತು ಬಳಸುವುದು ನಮ್ಮ ಕರ್ತವ್ಯ. ಶಾಂಪೂ ಬದಲಿಗೆ ನವಿರುಕ ಎಂದು ಕರೆದರೆ ಅದು ನಮ್ಮ ಮಣ್ಣಿನ ವಾಸನೆಯನ್ನು ನೀಡುತ್ತದೆ. ಇದು ನಮ್ಮ ಭಾಷೆಯ ಶ್ರೀಮಂತಿಕೆಯ ಸಂಕೇತ. ಒಟ್ಟಿನಲ್ಲಿ ಶಾಂಪೂ ಎಂಬುದು ಬರೀ ವಿದೇಶಿ ಬಾಟಲಿಯಲ್ಲಿ ಬರುವ ದ್ರವವಲ್ಲ, ಅದು ನಮ್ಮ ಭಾರತೀಯ ಪರಂಪರೆ. ನೀವು ಇನ್ಮುಂದೆ ತಲೆಗೆ ಶಾಂಪೂ ಹಾಕುವಾಗ ಒಮ್ಮೆ ಈ 'ನವಿರುಕ' ಎಂಬ ಹೆಸರನ್ನು ನೆನಪಿಸಿಕೊಳ್ಳಿ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.