2026-06-08 02:43:05

Do you know what Israel called its war against Iran | ಇರಾನ್ ವಿರುದ್ಧದ ಸಮರಕ್ಕೆ ಇಸ್ರೇಲ್ ಇಟ್ಟ ಹೆಸರೇನು ಗೊತ್ತೆ ದುರ್ಗಾದೇವಿಗೂ ಈ ಹೆಸರಿಗೂ ಇದೆ ಸಂಬಂಧ | Speed News Kannada

Do you know what Israel called its war against Iran | ಇರಾನ್ ವಿರುದ್ಧದ ಸಮರಕ್ಕೆ ಇಸ್ರೇಲ್ ಇಟ್ಟ ಹೆಸರೇನು ಗೊತ್ತೆ ದುರ್ಗಾದೇವಿಗೂ ಈ ಹೆಸರಿಗೂ ಇದೆ ಸಂಬಂಧ | Speed News Kannada

ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ, ಐಡಿಎಫ್ ದಾಳಿಗಳಿಗೆ ಬೇರೆಯದೇ ಆಂತರಿಕ ಹೆಸರನ್ನು ನೀಡಲಾಗಿತ್ತು. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿರ್ಧಾರದಂತೆ.. ಇರಾನ್ ವಿರುದ್ಧದ ತನ್ನ ಕಾರ್ಯಾಚರಣೆಗೆ "ಸಿಂಹ ಘರ್ಜನೆ" ಎಂದು ಹೆಸರಿಡಲಾಯಿತು ಎಂದು ತಿಳಿದು ಬಂದಿದೆ.. ಜೂನ್ 2025 ರಲ್ಲಿ ಇರಾನ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲ್ ತನ್ನ ಕೊನೆಯ ಐಡಿಎಫ್ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ "ರೈಸಿಂಗ್ ಲಯನ್" ಎಂದು ಹೆಸರಿಡಲಾಯಿತು. ಪ್ರಸ್ತುತ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇರಾನ್ ಮೇಲಿನ ದಾಳಿಗಳು ಅಮೆರಿಕ ಮತ್ತು ಇಸ್ರೇಲ್ ನಡುವಿನ ಜಂಟಿ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಅಲ್‌-ಜಜೀರಾಗೆ ತಿಳಿಸಿದ್ದಾರೆ.
ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ಜಂಟಿ ದಾಳಿ! ಸುರಕ್ಷಿತ ಅಂತಿದ್ದ ನಗರವೇ ಗಢಗಢ!
ಇಸ್ರೇಲ್ ದಾಳಿಯ ನಂತರ, ಇರಾನ್ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು, ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ಸ್ಥಳಾಂತರಿಸಿದೆ. ಇದರ ಮಧ್ಯ ಇಸ್ರೇಲ್‌ನಲ್ಲಿ ವಾಯುದಾಳಿಯ ಸೈರನ್‌ಗಳು ಸಹ ಮೊಳಗುತ್ತಿವೆ. ಸೂಕ್ಷ್ಮ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಜನರಿಗೆ ಸೂಚನೆ ನೀಡಲಾಗುತ್ತಿದೆ..
ಇದಕ್ಕೂ ಮೊದಲು, ಇಸ್ರೇಲ್ ಇರಾನ್ ಮೇಲಿನ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು 'ಜುದಾ ಗುರಾಣಿ' ಎಂದು ಹೆಸರಿಸಿತ್ತು. "ಶೀಲ್ಡ್ ಆಫ್ ಜುದಾ" ಎಂಬ ಆಂಗ್ಲ ಪದ ಇದಾಗಿದೆ. ರಕ್ಷಣಾತ್ಮಕ ಸಂಕೇತವಾಗಿ "ಗುರಾಣಿ" ಮತ್ತು "ಜುದಾ" ಯಹೂದಿ ಜನರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೃದಯಭೂಮಿಯನ್ನು ಉಲ್ಲೇಖಿಸುತ್ತದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.