ಬೆಂಗಳೂರು: ಡೀಸೆಲ್, ಪೆಟ್ರೋಲ್, ಸಿಎನ್ ಜಿ ದರ ಏರಿಕೆಯಿಂದ ಶ್ರೀಸಾಮಾನ್ಯರ ಜತೆಗೆ ಆಟೋ ಚಾಲಕರೂ ತತ್ತರಿಸಿ ಹೋಗಿದ್ದಾರೆ. ಆಟೋ ಮೀಟರ್ ದರ ಏರಿಸಬೇಕು ಮತ್ತು ಆಟೋ ಚಾಲಕರ ಮಕ್ಕಳ ಈಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ. ಸ್ನೇಹಜೀವಿ ಆಟೋ ಚಾಲಕರ ಟ್ರೇಡ್ ಯೂನಿಯನ್ ಸರ್ಕಾರಕ್ಕೆ ಈ ಮನವಿ ಮಾಡಿಕೊಂಡಿದೆ.
ಪ್ರತಿದಿನ 14 ಗಂಟೆಗಳ ಕಾಲ ದುಡಿದರೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ರಾಜ್ಯಾದ್ಯಂತ ‘ಒನ್ ಸಿಟಿ ಒನ್ ರೇಟ್’ ನೀತಿಯನ್ನು ಜಾರಿಗೊಳಿಸಬೇಕು. ಪ್ರಸ್ತುತ ಇರುವ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.
ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಕಡಿಮೆ ದರ ಸಿಗುತ್ತಿರುವುದರಿಂದ ಆಟೋ ಚಾಲಕರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಆದ್ದರಿಂದ ಆಟೋ ಚಾಲಕರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂಬ ಮಹತ್ವದ ಬೇಡಿಕೆಯನ್ನೂ ಯೂನಿಯನ್ ಮುಂದಿಟ್ಟಿದೆ.