ಭಾರತದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ತೀವ್ರ ಸ್ಪರ್ಧೆ ಶುರುವಾಗಿದೆ. ನಟ ಯಶ್ ಅಭಿನಯಿಸಿರುವ ಟಾಕ್ಸಿಕ್ ಹಾಗೂ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ ಕ್ಯಾಶ್ ಎದುರಾಗಿದೆ.ಧುರಂಧರ್ ದಿ ರಿವೆಂಜ್: ಚಲನಚಿತ್ರದ ನಿರ್ಮಾಪಕ ಆದಿತ್ಯ ಧರ್ ಅವರ ಮುಂಬರುವ ಧುರಂಧರ್ 2 ಮಾರ್ಚ್ 19, 2026 ರಂದು ಬಿಡುಗಡೆಗೆ ಸಿದ್ಧವಾಗಿದೆ. ರಣವೀರ್ ಸಿಂಗ್ ಅವರ ಧುರಂಧರ್ 2 ಹಾಗೂ ರಾಕಿಂಗ್ ಸ್ಟಾರ್ ನಟ ಯಶ್ ಅವರು ಅಭಿನಯಿಸಿರುವ ಟಾಕ್ಸಿಕ್ ಎರಡೂ ಸಿನಿಮಾಗಳು ಒಟ್ಟೋಟ್ಟಿಗೆ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿವೆ.
ಈ ಎರಡು ಸಿನಿಮಾಗಳು ಸಹ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿವೆ. ಧುರಂಧರ್ ದಿ ರಿವೆಂಜ್ ಸಿನಿಮಾದ ಚಿತ್ರ ನಿರ್ಮಾಪಕರು ಅಂತಿಮವಾಗಿ ಧುರಂಧರ್ 2ರ ಬಹುನಿರೀಕ್ಷಿತ ಟೀಸರ್ ಧುರಂಧರ್ ದಿ ರಿವೆಂಜ್ ಎಂದು ಬಿಡುಗಡೆ ಮಾಡಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಏಜೆಂಟ್ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಧುರಂಧರ್: ದಿ ರಿವೆಂಜ್ ಟೀಸರ್ ಯಾವುದೇ ಹೊಸ ದೃಶ್ಯಗಳನ್ನು ಸೇರಿಸಿಲ್ಲ. ಈಚೆಗೆ ಬಿಡುಗಡೆಯಾಗಿದ್ದ ಟಾಕ್ಸಿಕ್ ಟೀಸರ್ ಭಾರೀ ಸದ್ದು ಮಾಡಿತ್ತು.
ಧುರಂಧರ್ 2 vs ಟಾಕ್ಸಿಕ್ ಭಾರತೀಯ ಸಿನಿಮಾ ರಂಗದಲ್ಲಿ ಎರಡು ಮದಗಜಗಳ ನಡುವಿನ ಸ್ಪರ್ಧೆ ಎನ್ನುವಂತೆ ಆಗಿದೆ. ಧುರಂಧರ್ 2 ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ಯಶ್ ಅವರ ಮುಂಬರುವ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗೋನ್-ಅಪ್ಸ್' ನೊಂದಿಗೆ ಪೈಪೋಟಿಗೆ ಇಳಿದಿದೆ. ಉದ್ದೇಶಪೂರ್ವಕಾಗಿ ಟಾಕ್ಸಿಕ್ ಸಿನಿಮಾ ಬಿಡುಗಡೆಯ ದಿನದಂದೇ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.ನಿರ್ದೇಶಕ ಆದಿತ್ಯ ಧರ್ ಪೋಸ್ಟ್ ಗೆ ಕನ್ನಡಿಗರ ವ್ಯಂಗ್ಯ
ಇನ್ನು ಧುರಂಧರ್ ದಿ ರಿವೆಂಜ್: ಚಲನಚಿತ್ರದ ನಿರ್ಮಾಪಕ ಆದಿತ್ಯ ಧರ್ ಅವರು, "ಹಾಳಾಗುವ ಸಮಯ ಬಂದಿದೆ" ಎನ್ನುವ ಪೋಸ್ಟ್ಗೆ ಕನ್ನಡಿಗರು ನಕ್ಕಿದ್ದಾರೆ. ರವಿ ಕೀರ್ತಿಗೌಡ ಅವರು, ಹಾಳು ಮಾಡುವ ಸಮಯ” ಎಂದಾಗಬೇಕು ಎಂದಿದ್ದಾರೆ. ಪ್ರಜ್ವಲ್ ಎನ್ನುವವರು ಹಾಳಾಗುವ ಅಲ್ಲ.... ಹಾಳು ಮಾಡುವ ಸಮಯ ಬಂದಿದೆ. ಸಜಿತ್ ಎನ್ನುವವರು, ಕನ್ನಡದಲ್ಲಿ ನೋಡಿ. ಸಂತೋಷವಾಯಿತು. ಸೂಪರ್. ಪರಿಚಿತವಲ್ಲದ ಭಾಷೆಯಿಂದಾಗಿ ಮೊದಲ ಭಾಗವನ್ನು ತಪ್ಪಿಸಿಕೊಂಡೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರ್ಶ ಹೆಚ್.ಎಂ ಎನ್ನುವವರು ಇದು ಕೇವಲ ಪೋಸ್ಟರ್‌ಗೆ ಸೀಮಿತವಾಗಿದೆ. ಮೊದಲ ಭಾಗ OTTಯಲ್ಲಿ ಕನ್ನಡದಲ್ಲಿ ಬಿಡುಗಡೆಯಾಗಿಲ್ಲ. ಅದನ್ನು ಪರಿಶೀಲಿಸಿ ಮತ್ತು ಅನುವಾದವನ್ನು ಪರಿಶೀಲಿಸಿ. "ಹಾಳು ಮಾಡುವ ಸಮಯ ಬಂದಿದೆ" ಎಂದಿದ್ದಾರೆ.
ಹಾಳಾಗುವ ಸಮಯ ಬಂದಿದೆ