2026-06-08 04:35:19

Dhurandhar 2 Vs Toxic Whose film budget is higher | ಧುರಂಧರ್ 2 Vs ಟಾಕ್ಸಿಕ್ ಯಶ್ ರಣವೀ‌ರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್‌ ಹೆಚ್ಚು | Speed News Kannada

Dhurandhar 2 Vs Toxic Whose film budget is higher  | ಧುರಂಧರ್ 2 Vs ಟಾಕ್ಸಿಕ್ ಯಶ್ ರಣವೀ‌ರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್‌ ಹೆಚ್ಚು | Speed News Kannada

ಧುರಂಧರ್ 2 Vs ಟಾಕ್ಸಿಕ್ ಟಾಕ್ ಜೋರಾಗಿದೆ. ರಣವೀರ್ ಸಿಂಗ್ ಅವರ 'ಧುರಂಧರ್ 2' ಚಿತ್ರ ಮತ್ತು ಯಶ್ ಅವರ 'ಟಾಕ್ಸಿಕ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪರಸ್ಪರ ಕ್ಯಾಶ್ ಆಗುತ್ತಿವೆ. ಈ ಎರಡು ಚಿತ್ರಗಳಲ್ಲಿ ಯಾವುದು ಹೆಚ್ಚು ಹಣ ಗಳಿಸುತ್ತದೆ ಎಂಬ ಕುತುಹೂಲ ಮೂಡಿದ್ದು, ಬಿಡುಗಡೆಯಾದ ಬಳಿಕ ಆ ಬಗ್ಗೆ ತಿಳಿಯಲಿದೆ. ಹಾಗಾದರೆ ಯಾವ ಚಿತ್ರದ ಬಜೆಟ್ ಹೆಚ್ಚಿದೆ? ಆ ಬಗ್ಗೆ ಇಲ್ಲಿ ನೋಡೋಣ.
ಮಾರ್ಚ್ ತಿಂಗಳು ಸಿನಿಮಾ ಪ್ರಿಯರಿಗೆ ಸುಗ್ಗಿಯೇ ಸರಿ. ಏಕೆಂದರೆ ಮಾರ್ಚ್ 19ರಂದು ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾಗಲಿವೆ. ಧುರಂಧರ್ 2 ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ ಇನ್ನೊಂದು ಟಾಕ್ಸಿಕ್. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. 'ಧುರಂಧರ್ 2' ಮತ್ತು 'ಟಾಕ್ಸಿಕ್' ಎರಡೂ ಚಿತ್ರಗಳು ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗಲಿವೆ. ಈ ಎರಡೂ ಚಿತ್ರಗಳ ಮಧ್ಯೆ ಕ್ಯಾಶ್ ಏರ್ಪಡಲಿದೆ. ಈ ಎರಡೂ ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎರಡೂ ಚಿತ್ರಗಳು ದೊಡ್ಡ ಬಜೆಟ್‌ ನಿರ್ಮಾಣವಾಗಿವೆ. ಯಶ್ ಮತ್ತು ರಣವೀರ್ ನಡುವೆ ಬಾಕ್ಸ್ ಆಫೀಸ್ ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸದ್ಯದ ಚರ್ಚೆ. ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ದೊಡ್ಡ ನಟಿಯರು ನಟಿಸಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂ.
'ಧುರಂಧರ್ 2' ಚಿತ್ರದ ಬಜೆಟ್ 'ಟಾಕ್ಸಿಕ್' ಚಿತ್ರಕ್ಕೆ ಹೋಲಿಸಿದರೆ ಕಡಿಮೆ. 'ಧುರಂಧರ್ 2' ಚಿತ್ರದ ಬಜೆಟ್ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ ಏಕೆಂದರೆ ಇದನ್ನು ಮೊದಲ ಭಾಗದ ಜೊತೆಗೆ ಚಿತ್ರೀಕರಿಸಲಾಗಿದೆ. ವರದಿಗಳ ಪ್ರಕಾರ, ಎರಡೂ ಭಾಗಗಳಿಗೆ 300-350 ಕೋಟಿ ರೂ. ಖರ್ಚು ಮಾಡಲಾಗಿದೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರವೇ ಗೆಲ್ಲಬಹುದು ಎಂಬುದು ಅಭಿಮಾನಿಗಳ ಊಹೆ. ನಿಜವಾದ ಸಿನಿಪ್ರಿಯರು ಎರಡೂ ಸಿನಿಮಾ ಗೆಲ್ಲಲಿ ಎಂದು ಬಯಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.