2026-06-08 01:26:06

Dhurandhar 2 surpasses Shah Rukh Khan film | ಶಾರುಖ್‌ ಖಾನ್‌ ಸಿನಿಮಾವನ್ನೇ ಹಿಂದಿಕ್ಕಿದ ಧುರಂಧರ್‌ 2 | Speed news kannada

Dhurandhar 2 surpasses Shah Rukh Khan film | ಶಾರುಖ್‌ ಖಾನ್‌ ಸಿನಿಮಾವನ್ನೇ ಹಿಂದಿಕ್ಕಿದ ಧುರಂಧರ್‌ 2 | Speed news kannada

ರಣ್‌ವೀರ್‌ ಸಿಂಗ್‌ ನಟಿಸಿರುವ ಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ದೊಡ್ಡ ಹಿಟ್‌ ಆಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ‘ಧುರಂಧರ್ 2’ ಸಿನಿಮಾ ಶಾರುಖ್ ಖಾನ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಪಠಾಣ್’ನನ್ನು ಹಿಂದಿಕ್ಕಿ ನಂಬರ್ ಎನಿಸಿಕೊಂಡಿದೆ. ಅಸಲಿಗೆ ಭಾರತದಲ್ಲಿ ಕೆಲ ವಾರದ ಹಿಂದೆಯೇ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಹಿಂದಿಕ್ಕಿದೆ ಆದರೆ ಈ ಬಾರಿ ಯುನೈಟೆಡ್ ಕಿಂಗ್​​ಡಮ್​​ನಲ್ಲೂ ಸಹ ‘ಪಠಾಣ್’ ಸಿನಿಮಾವನ್ನು ‘ಧುರಂಧರ್ 2’ ಸಿನಿಮಾ ಸೋಲಿಸಿದೆ. ಈ ಚಿತ್ರವು ಕೇವಲ ಯುಕೆಯಲ್ಲಿ ಮಾತ್ರವಲ್ಲದೆ, ಇನ್ನೂ ಕೆಲವು ದೇಶಗಳಲ್ಲಿ ಸಹ ದಾಖಲೆ ಮೊತ್ತದ ಗಳಿಕೆ ಮಾಡಿದೆ. ಉತ್ತರ ಅಮೇರಿಕಾದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ‘ಬಾಹುಬಲಿ 2’ ಸಿನಿಮಾದ ದಾಖಲೆಯನ್ನು ಉತ್ತರ ಅಮೆರಿಕನಲ್ಲಿ ಮುರಿದಿದೆ ‘ಧುರಂಧರ್ 2’. ಮತ್ತು ಜರ್ಮನಿಯಲ್ಲೂ ಸಹ ಗಳಿಕೆಯಲ್ಲಿ ದಾಖಲೆಯನ್ನು ಈ ಸಿನಿಮಾ ಬರೆದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.