2026-06-08 04:01:02

Dhoni fined for speed ride | ಅತಿ ವೇಗವಾಗಿ ಕಾರು ಓಡಿಸಿದ ಧೋನಿಗೆ ಬಿತ್ತು ದಂಡ | Speed News Kannada

Dhoni fined for speed ride | ಅತಿ ವೇಗವಾಗಿ ಕಾರು ಓಡಿಸಿದ ಧೋನಿಗೆ ಬಿತ್ತು ದಂಡ | Speed News Kannada

ರಾಂಚಿಯಲ್ಲಿ ಅತಿ ವೇಗದ ಚಾಲನೆಗಾಗಿ ಎಂಎಸ್ ಧೋನಿಗೆ 1,000 ರೂ ದಂಡ ಸಂಚಾರಕ್ಕಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ರಾಂಚಿ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಎಂ.ಎಸ್.ಧೋನಿ ಅವರು ತಮ ನಿವೇಶನದ ಸಮೀಪವೇ ಅತಿ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಂಚಿ ಸಂಚಾರಿ ಠಾಣೆ ಪೊಲೀಸರು 183 ಸೆಕ್ಷನ್‌ನಡಿ ಚೆನ್ನೈ ಸೂಪರ್ ಕಿಂಗ್ ತಂಡದ ಆಟಗಾರನಿಗೆ ಡಿಜಿಟಲ್ ಚಲಾನ್ ಮೂಲಕ 1 ಸಾವಿರ ರೂ. ದಂಡ ವಿಧಿಸಿದೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಧೋನಿ ಅವರು ಕಠಿಣ ತರಬೇತಿ ನಡೆಸುತ್ತಿದ್ದು, ಈ ಸಮಯದಲ್ಲೇ ಅವರು ವೇಗದ ಮಿತಿಯನ್ನು ಮೀರಿ ಕಾರನ್ನು ಚಲಾಯಿಸಿರುವುದು ಕಂಡುಬಂದಿದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಎಂ.ಎಸ್.ಧೋನಿ ಅವರು ತಮ ನಿವೇಶನದ ಸಮೀಪವೇ ಅತಿ ವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.