2026-06-08 04:38:52

Dhawan set to tie the knot with Sufi Shine | ಸೂಫಿ ಶೈನ್ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್ 40ನೇ ವರ್ಷಕ್ಕೆ 2ನೇ ಮದುವೆ | Speed News Kannada

Dhawan set to tie the knot with Sufi Shine | ಸೂಫಿ ಶೈನ್ ಜತೆ ಸಪ್ತಪದಿ ತುಳಿಯಲು ಸಜ್ಜಾದ ಧವನ್ 40ನೇ ವರ್ಷಕ್ಕೆ 2ನೇ ಮದುವೆ | Speed News Kannada

ಟೀಂ ಇಂಡಿಯಾ ಮಾಜಿ ಆಟಗಾರ ಶಿಖರ್ ಧವನ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲು ಶಿಖರ್ ಧವನ್ ಸಜ್ಜಾಗಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯ ಜೀವನದಲ್ಲೂ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದಾರೆ.
ಗೆಳತಿ ಸೋಫಿ ಶೈನ್ ಜತೆ ಎಂಗೇಜ್ ಆದ ಕ್ರಿಕೆಟಿಗ ಶಿಖರ್ ಧವನ್: ಚಿತ್ರಗಳು ಇಲ್ಲಿವೆ ಸಾಮಾಜಿಕ ಮಾಧ್ಯಮ ಬಳಸುವುದು ಮಗಳ ಆಯ್ಕೆಗೆ ಬಿಟ್ಟ ವಿಚಾರ: ವರುಣ್ ಧವನ್ ಐರ್ಲೆಂಡ್ ಮೂಲದ ಕ್ರಿಕೆಟ್ ಆಟಗಾರ್ತಿ ಸೋಫಿ ಶೈನ್ ಜೊತೆಗೆ ಮಾಜಿ ಕ್ರಿಕೆಟಿಗ ವಿವಾಹವಾಗಲಿದ್ದಾರೆ. ನಿನ್ನೆ (ಫೆ.20) ಧವನ್ ತಮ್ಮ ಸಂಗೀತ ಶಾಸ್ತ್ರದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಇಬ್ಬರ ಮದುವೆ ಸಮಾರಂಭವು ದೆಹಲಿ-ಎನ್‌ಸಿಆ‌ರ್ ಪ್ರದೇಶದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಮದುವೆಗೆ ಕ್ರಿಕೆಟ್ ತಾರೆಯರು, ಬಾಲಿವುಡ್‌ ನಟ-ನಟಿಯರು ಆಗಮಿಸುವ ನಿರೀಕ್ಷೆಯಿದೆ.ಇತ್ತೀಚೆಗೆ ಶಿಖ‌ರ್ ಧವನ್ ಹಾಗೂ ಸೋಫಿ ಶೈನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ದವು. ಶಿಖರ್ ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗಳಿಗೆ ಜೋರಾವರ್ ಧವನ್ ಹೆಸರಿನ 11 ವರ್ಷದ ಮಗನಿದ್ದಾನೆ. ಆದರೆ 2023ರಲ್ಲಿ ದಂಪತಿ ಕಾನೂನು ಮುಖಾಂತರ ವಿಚ್ಛೇದನ ಪಡೆದು ಪರಸ್ಪರ ಬೇರೆ ಬೇರೆ ವಾಸಿಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.