ಕನ್ನಡದ ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಸದ್ಯ, ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಇವರು ಹೊಸ ಆಲ್ಬಮ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.ಇದೀಗ ಈ ಇಬ್ಬರ ಸಂಯೋಜನೆಯಲ್ಲಿ 'ಜಿನುಗೊ ಮಳೆ' ಹೆಸರಿನ ಹೊಸ ಆಲ್ಬಮ್ ಹಾಡೊಂದು ಮೂಡಿಬರುತ್ತಿದೆ.
ಈಗಾಗಲೇ ಆಲ್ಬಮ್ ಹಾಡಿನ ಚಿತ್ರೀಕರಣ ಆರಂಭಗೊಂಡಿದ್ದು, ಶೀಘ್ರದಲ್ಲೆ ಈ ಹಾಡು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಹೊಚ್ಚ ಹೊಸ ಕನ್ನಡ ಆಲ್ಬಮ್ ಹಾಡನ್ನು ಆಕಾಶ್ ಉಣ್ಣಿಕೃಷ್ಣನ್ ಅವರು ನಿರ್ದೇಶನ ಮಾಡುತ್ತಾರೆ. ಇದೊಂದು ಪ್ರಣಯಗೀತೆಯಾಗಿದ್ದು, ಚಿತ್ರೀಕರಣದ ಮುಹೂರ್ತ ಸಮಾರಂಭವು ಇತ್ತೀಚೆಗೆ ನಡೆದಿದೆ.
ಇದರ ಕುರಿತಾದ ವಿಡಿಯೊವನ್ನು ಧನುಷ್ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮೂಲಕ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣಗೆ ಅಭಿನಂದನೆ ತಿಳಿಸುತ್ತಿದ್ದಾರೆ.