2026-06-08 01:26:55

Deepika Padukone criticizes the film Dhurandhar 2 | ಧುರಂಧರ್ 2 ಚಿತ್ರಕ್ಕೆ ದೀಪಿಕಾ ಪಡುಕೋಣೆ ಟೀಕೆ | Speed news kannada

Deepika Padukone criticizes the film Dhurandhar 2 | ಧುರಂಧರ್ 2 ಚಿತ್ರಕ್ಕೆ ದೀಪಿಕಾ ಪಡುಕೋಣೆ ಟೀಕೆ | Speed news kannada

ಇಡೀ ದೇಶಾದ್ಯಂತ ಧುರಂದರ್‌ 2 ಸಿನಿಮಾ ಹೆಸರು ಮಾಡುತ್ತಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ  ಮೆರೆದಾಡುತ್ತಿದೆ. ಆದರೆ ಇಲ್ಲಿಯವರೆಗೂ ದೀಪಿಕಾ ಪಡುಕೋಣೆ ಸಿನಿಮಾ ಬಗ್ಗೆ ಯಾವುದೇ ರಿಯಾಕ್ಟ್‌ ಮಾಡಿರಲಿಲ್ಲ.  ಈ ನಡುವೆ ದೀಪಿಕಾ ಪಡುಕೋಣೆ ಅವರ ಅಭಿಪ್ರಾಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ರು. ಇದೀಗ ದೀಪಿಕಾ ಪಡುಕೋಣೆ ಕೊನೆಗೂ ಧುರಂದರ್ 2 ಬಗ್ಗೆ ರಿಯಾಕ್ಟ್  ಮಾಡಿದ್ದಾರೆ ಎನ್ನುವ ಸ್ಕ್ರೀನ್‌ಶಾಟ್‌ ಎಲ್ಲೆಡೆ ವೈರಲ್‌ ಆಗಿದೆ..ಎಲ್ಲೆಡೆ ವೈರಲ್‌ ಆಗಿರುವ ಸ್ಕ್ರೀನ್‌ ಶಾಟ್‌ನಲ್ಲಿ ದೀಪಿಕಾ ಪಡುಕೋಣೆ ಚಿತ್ರದಲ್ಲಿ ಕೆಲವು ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರಂತೆ.

ವೈರಲ್ ಚಿತ್ರದಲ್ಲಿ, ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡು, ರಣವೀರ್ ಸಿಂಗ್ ಅವರ ಅಭಿನಯವನ್ನು ಹೊಗಳಿದ್ದಾರೆ ಎನ್ನಲಾಗಿದೆ. "ಧುರಂಧರ್ ನೋಡಿದೆ, 3 ಗಂಟೆ 49 ನಿಮಿಷಗಳ ಪ್ರತಿಯೊಂದು ಕ್ಷಣವೂ ಮೌಲ್ಯವಾಗಿದೆ. ನನ್ನ ಗಂಡ ಬೆಸ್ಟ್ ಎಂದು ಹೆಮ್ಮೆಯಿಂದ ಹೇಳಬಹುದು. ನಿಮ್ಮ ಮೇಲೆ ತುಂಬಾ ಹೆಮ್ಮೆ ಇದೆ, ರಣವೀರ್" ಎಂದು ಬರೆದಿದ್ದಾರೆ. ಮತ್ತಷ್ಟು ಬರೆಯಲಾಗಿದ್ದು, "ನಟನಾಗಿ ಮತ್ತು ಈ ದೇಶದ ನಾಗರಿಕನಾಗಿ, ರಾಜಕೀಯ ಧೋರಣೆಯಿಂದ ಪ್ರಭಾವಿತರಾಗದೆ ಸತ್ಯ ಮತ್ತು ಸರಿಯಾದ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ. ನಾನು ಕೆಲವು ವಿಷಯಗಳನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ಈ ಸಿನಿಮಾ ನೋಡುವುದು ನನಗೆ ತುಂಬಾ ಇಷ್ಟವಾಯಿತು. ಎಲ್ಲಾ ಕಲಾವಿದರು ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ಬರೆಯಲಾಗಿದೆ.. ವಾಸ್ತವದಲ್ಲಿ, ಇದು ಫೇಕ್ ಚಿತ್ರವಾಗಿದ್ದು, ದೀಪಿಕಾ ಪಡುಕೋಣೆ ಧುರಂಧರ್: ದ ರಿವೆಂಜ್ ಚಿತ್ರಕ್ಕೆ ಯಾವುದೇ ಸ್ಟೋರಿ ಹಾಕಿಲ್ಲ. ಅವರು ಸಿನಿಮಾ ಬಗ್ಗೆ ವಿಮರ್ಶೆ ಕೂಡಾ ಮಾಡಿಲ್ಲ. ಸದ್ಯ ಹರಿದಾಡುತ್ತಿರುವುದು ಫೇಕ್ ಸ್ಕ್ರೀನ್ ಶಾಟ್ ಅಂತ ಹೇಳಲಾಗ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.