2026-06-08 06:47:59

DCM Shivakumar Going To Meet His Superiors Tomorrow | ನಾಳೆ ದೆಹಲಿಗೆ ಡಿಸಿಎಂ ಶಿವಕುಮಾರ್ ವರಿಷ್ಠರ ಭೇಟಿಗೆ ಅವಕಾಶ ಸಿಗಲಿದೆಯೇ? | Speed News Kannada

DCM Shivakumar Going To Meet His Superiors Tomorrow |  ನಾಳೆ ದೆಹಲಿಗೆ ಡಿಸಿಎಂ ಶಿವಕುಮಾರ್ ವರಿಷ್ಠರ ಭೇಟಿಗೆ ಅವಕಾಶ ಸಿಗಲಿದೆಯೇ? | Speed News Kannada

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಾಳೆ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ.
ನಾಳೆ ಬೆಳಗ್ಗೆ 9.50ರ ವಿಮಾನದಲ್ಲಿ ಶಿವಕುಮಾರ್ ತೆರಳುತ್ತಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆ ಸಂಬಂಧ ಪ್ರಿಯಾಂಕ್ ಗಾಂಧಿ ಅವರು ಪ್ರಮುಖ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ಶಿವಕುಮಾರ್‌ ಭಾಗವಹಿಸಲಿದ್ದಾರೆ.
ಹಾಗೆಯೇ ಅವರು ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡುವ ಸಾಧ್ಯತೆಗಳಿವೆ. ಅಧಿಕಾರ ಹಸ್ತಾಂತರ ಕುರಿತು ಒತ್ತಡ ಹೇರಲಿದ್ದು, ಅವಕಾಶ ನೀಡುವಂತೆ ಮತ್ತೊಮ್ಮೆ ಕೋರಲಿದ್ದಾರೆ. 
ಈ ಹಿಂದೆ ಅವರು ದೆಹಲಿಗೆ ಭೇಟಿ ನೀಡಿದಾಗ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಸಂಸತ್‌ ಆಧಿವೇಶನ ನಡೆಯುತ್ತಿದ್ದು, ವರಿಷ್ಠರು ಬೇಟಿಗೆ ಅವಕಾಶ ನೀಡಲಿದ್ದಾರೆಯೇ ಎನ್ನುವ ಮಾಹಿತಿ ಲಭ್ಯವಾಗಿಲ್ಲ. 
ಈ ಸಂಬಂಧ ಪ್ರತಿಕ್ರಿಯಿಸಿರುವ ಶಿವಕುಮಾರ್‌ ಅವರು, ಹೈಕಮಾಂಡ್ ನವರು ಕರೆದಿದ್ದಾರೆ. ಪಕ್ಷದ ನಾಯಕರನ್ನ ಭೇಟಿ ಮಾಡುವುದು ನಮ್ಮ ಕರ್ತವ್ಯ. ದೆಹಲಿಗೆ ತೆರಳಲು ನಾನು ಸಿಎಂ ಅವರ ಅನುಮತಿ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.