2026-06-08 06:53:00

Davanagere by election | ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್‌ನಿಂದ ಹಿಂದೆ ಸರಿದ ಜಮೀರ್‌ | Speed news kannada

Davanagere by election | ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್‌ನಿಂದ ಹಿಂದೆ ಸರಿದ ಜಮೀರ್‌ | Speed news kannada

ಏಪ್ರಿಲ್‌ 9ರಂದು ನಡೆಯುವ ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಮುಸ್ಲಿಂ ಮುಖಂಡ ಸಾದಿಕ್‌ ಪೈಲ್ವಾನ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಒತ್ತಾಹಿಸಿದ್ದರು.  ಆದರೆ ಕಾಂಗ್ರೆಸ್‌ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡದಿದ್ದರಿಂದ ಜಮೀರ್‌ ಅಸಮದಾನಗೊಂಡಿದ್ದು ಚುನಾವಣಾ ಪ್ರಚಾರದಿಂದ ದೂರ ಇದ್ದಾರೆ.  ಸಾದಿಕ್‌ ಬಂಡಾಯವಾಗಿ ಸ್ಪರ್ಧಿಸಲು ಜಮೀರ್‌ ಕಾರಣ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಎಲ್ಲಾ ಗೊಂದಲಗಳ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆಯಲ್ಲಿ ಜಮೀರ್‌ ಸಮರ್ಥ್‌ ಪರವಾಗಿ ಪ್ರಚಾರ ಕೈಗೊಳ್ಳಲು ಮುಂದಾಗಿದ್ದರು. ಬೂದಿ ಮುಚ್ಚಿದ ಕೆಂಡದಂತಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯಕ್ಕೆ ಸಚಿವ ಮಲ್ಲಿಕಾರ್ಜುನ್ ಅವರ ‘ಜಮೀರ್ ಬರುವುದಕ್ಕಿಂತ ಬಾರದಿರುವುದೇ ಒಳ್ಳೆಯದು’ ಎನ್ನುವ ಹೇಳಿಕೆ ಮತ್ತೆ ಕಿಡಿ ಹೊತ್ತಿಸಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.