ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಕೆಲವೇ ಕೆಲವು ಸಿನಿಮಾಗಳಲ್ಲಿ ನಟ ದರ್ಶನ್ ತೂಗುದೀಪ ಅವರೊಂದಿಗೆ ಯಜಮಾನ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಆದರೆ, ಈ ಸಿನಿಮಾದ ಪ್ರಚಾರಕ್ಕೆ ಎಲ್ಲಿಯೂ ರಶ್ಮಿಕಾ ಮಂದಣ್ಣ ಬಂದಿರಲಿಲ್ಲ. ಇದಕ್ಕೆ ಕಾರಣ ನಟ ದರ್ಶನ್ ಎಂದು ಹೇಳಲಾಗುತ್ತಿದೆ. ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ಬಿಚ್ಚಿಟ್ಟಿದ್ದಾರೆ. ದರ್ಶನ್ ಅವರು ಶೂಟಿಂಗ್ ಸೆಟ್‌ನಲ್ಲಿ ತುಂಬಾ ಪಾಪದವರ ಥರ ಪಾಪಚ್ಚಿಯಂತೆ ಇರುತ್ತಾರೆ. ದೊಡ್ಡವ ರಂತೆ ಕಂಡರೂ ಮಾತನಾಡುವಾಗ ತುಂಬಾ ಚಿಕ್ಕ ಮಕ್ಕಳ ಹಾಗೆ ಮಾತನಾಡುತ್ತಾರೆ. ಇದು ಅವರನ್ನು ತುಂಬಾ ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಾಗುತ್ತದೆ. ದರ್ಶನ್ ಅವರು ಸಡನ್ ಆಗಿ ಬಂದು ಚೆನ್ನಾಗಿದ್ದೀರಮ್ಮಾ' ಎಂದು ಕೇಳಿದಾಗ ನನಗೆ ಸೋ ಕ್ಯೂಟ್ ಅನಿಸಿತ್ತು.
ಯಜಮಾನ ಚಿತ್ರ ಬಿಡುಗಡೆ ಸಮಯದಲ್ಲಿ ಪ್ರಚಾರ ಮಾಡುವಗ ಹಲವು ಕಡೆ ರಶ್ಮಿಕಾ ಅವರನ್ನು ಮೀಡಿಯಾ ಮುಂದೆ ಬರಲು ದರ್ಶನ್ ಅವರು ಬಿಡಲಿಲ್ಲ ಎನ್ನುವ ಮಾತಿದೆ. ಆದರೆ, ಇದಕ್ಕೆ ಕಾರಣ ಮಾಧ್ಯಮಗಳು ಕೇಳುವ ಪ್ರಶ್ನೆಗೆ ಆಕೆಯ ಮನಸಿಗೆ ನೋವುಂಟು ಮಾಡುತ್ತೆ ಅಂತ ಮಾಧ್ಯಮಗಳಿಂದ ದೂರವಿಟ್ಟಿದ್ದರು. ಜೊತೆಗೆ, ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿಯೊಂದಿಗಿನ ಮದುವೆ ಸಂಬಂಧವನ್ನು ಕೈಬಿಟ್ಟಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ತಪ್ಪಿತಸ್ಥೆ, ಮೋಸಗಾತಿ ಎನ್ನುವ ಪಟ್ಟ ಕಟ್ಟಿದ್ದರು. ಹೀಗಾಗಿ, ಸಿನಿಮಾ ಪ್ರಚಾರದಿಂದ ದೂರವಿರುವಂತೆ ದರ್ಶನ್ ಅವರೇ ಚಿತ್ರತಂಡಕ್ಕೆ ತಿಳಿಸಿದ್ದರೆ. ಇದೀಗ ನಟ ರಕ್ಷಿತ್ ಶೆಟ್ಟಿಯೇ ರಶ್ಮಿಕಾಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ರಶ್ಮಿಕಾ ತಾಯಿ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಕನ್ನಡಿಗರು ರಶ್ಮಿಕಾ ಬೆಂಬಲಕ್ಕೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಅವರ ಹಳೆಯ ಸಂದರ್ಶನದ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.