2026-07-06 11:20:00

Danni Wyatt Hodge | ವನಿತಾ ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಡ್ಯಾನಿ ವ್ಯಾಟ್ ಹಾಡ್ಜ್ | SNK

Danni Wyatt Hodge | ವನಿತಾ ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಡ್ಯಾನಿ ವ್ಯಾಟ್ ಹಾಡ್ಜ್ | SNK

ಲಾರ್ಡ್ಸ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಚಾಂಪಿಯನ್‌ ಆಗಿದೆ. ಹತ್ತನೇ ವನಿತಾ ಟಿ20 ವಿಶ್ವಕಪ್‌ ನ ಫೈನಲ್‌ ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ ಆಸೀಸ್‌ ತಂಡವು ಬರೋಬ್ಬರಿ ಏಳನೇ ಬಾರಿಗೆ ಕಪ್‌ ಗೆದ್ದು ಸಂಭ್ರಮಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ದಾಖಲೆ ಪುಟದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 300 ರನ್ ಗಳಿಸಿದ ಮೊದಲ ಆಟಗಾರ್ತಿ ಡ್ಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೂಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಡ್ಯಾನಿ ವ್ಯಾಟ್‌ ಹಾಡ್ಜ್ ಫೈನಲ್‌ ಪಂದ್ಯದಲ್ಲಿ ವಿಫಲರಾದರು. 9 ಎಸೆತಗಳಲ್ಲಿ 8 ರನ್‌ ಮಾಡಿದ್ದ ಅವರು ಸುತರ್‌ಲ್ಯಾಂಡ್‌ ಎಸೆತದಲ್ಲಿ ಕೀಪರ್‌ ಮೂನಿಗೆ ಕ್ಯಾಚಿತ್ತು ಮರಳಿದರು. ಫೈನಲ್‌ ಪಂದ್ಯಕ್ಕೆ ಮೊದಲು ಅವರಿಗೆ ಈ ಸಾಧನೆಗೆ ಕೇವಲ ಆರು ರನ್‌ಗಳು ಬೇಕಾಗಿದ್ದವು. ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲೇ ಅವರು ಅದನ್ನು ಸಾಧಿಸಿದರು. ಈ ವಿಶ್ವಕಪ್‌ ನಲ್ಲಿ ಅವರು 7 ಇನ್ನಿಂಗ್ಸ್‌ಗಳಲ್ಲಿ 302 ರನ್‌ ಗಳಿಸಿದ್ದಾರೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ವೈಯಕ್ತಿಕ ರನ್‌ ಆಗಿದೆ.

ಲಂಕಾ ವಿರುದ್ದದ ಮೊದಲ ಪಂದ್ಯದಲ್ಲಿ ಅವರು ಅಜೇಯ ಶತಕ ಬಾರಿಸಿದ್ದರು. 62 ಎಸೆತಗಳಲ್ಲಿ 105 ರನ್‌ ಮಾಡಿದ್ದರು. ವಿಂಡೀಸ್‌ ವಿರುದ್ದದ ಪಂದ್ಯದಲ್ಲಿ 42 ಎಸೆತಗಳಲ್ಲಿ 65 ರನ್‌ ಮಾಡಿದ್ದರು. ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಅವರು 53 ಎಸೆತಗಳಲ್ಲಿ ಅಜೇಯ 89 ರನ್‌ ಮಾಡಿದ್ದರು. 2026 ರ ಆರಂಭದಲ್ಲಿ ತಾಯಿಯಾದ ವ್ಯಾಟ್-ಹಾಡ್ಜ್ ಮಾದರಿಯಾಗಿದ್ದಾರೆ. ತಮ್ಮ ಮೊದಲ ಶತಕವನ್ನು ಮಗಳು ಡೈಸಿಗೆ ಅರ್ಪಿಸಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.