2026-03-07 05:14:19

CSK player Rahul Chahar announces divorce | ನರಕ ಕಂಡಿದ್ದೇನೆ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚ್ಛೇದನ ಘೋಷಿಸಿದ CSK ಆಟಗಾರ ರಾಹುಲ್‌ ಚಹರ್ | Speed News Kannada

CSK player Rahul Chahar announces divorce | ನರಕ ಕಂಡಿದ್ದೇನೆ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚ್ಛೇದನ ಘೋಷಿಸಿದ CSK ಆಟಗಾರ ರಾಹುಲ್‌ ಚಹರ್ | Speed News Kannada

ಟೀಂ ಇಂಡಿಯಾ ಹಾಗೂ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಪತ್ನಿ ಇಶಾನಿ ಜೋಹರ್‌ನಿಂದ ವಿಚ್ಛೇದನ ಪಡೆದಿದ್ದಾರೆ. ಈ ಬಗ್ಗೆ ಚಹರ್ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ. 2022ರಲ್ಲಿ ಮಾರ್ಚ್ ನಲ್ಲಿ ರಾಹುಲ್ ಇಶಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ತಮ್ಮ ದಾಂಪತ್ಯ ಜೀವನದಿಂದ ದೂರಾಗಿದ್ದಾರೆ.
ನಾನು ನನ್ನ ಜೀವನ ಅರ್ಥ ಮಾಡಿಕೊಳ್ಳುವ ಮೊದಲೇ ಮದುವೆಯಾಗಿದ್ದೆ. ಆ ಬಳಿಕ ನಿರೀಕ್ಷಿಸದ ಪಾಠಗಳು ಎದುರಾಗಿತ್ತು. ಕೆಲವು ಸಂಬಂಧಗಳು ಶಾಶ್ವತವಾಗಿ ನಮ್ಮೊಂದಿಗೆ ಉಳಿಯದಿದ್ದರೂ ಕೂಡ ಆ ಸಂಬಂಧಗಳಿಂದ ಕಲಿತ ಪಾಠ ಎಂದಿಗೂ ನಮ್ಮೊಂದಿಗೆ ಇರುತ್ತದೆ.
ನಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದೆ, ಆ ಸಮಯದಲ್ಲಿ, ನಾನು ನನ್ನನ್ನು, ನನ್ನ ಮೌಲ್ಯವನ್ನು ಅಥವಾ ನಾನು ಬಯಸುವ ಜೀವನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲ. ನಂತರದ ವರ್ಷಗಳು ನಾನು ಎಂದಿಗೂ ನಿರೀಕ್ಷಿಸದ ಪಾಠಗಳನ್ನು ಕಲಿಸಿದವು. ಕಳೆದ 15 ತಿಂಗಳುಗಳನ್ನು ನ್ಯಾಯಾಲಯದಲ್ಲೇ ಕಳೆದಿದ್ದೇನೆ.ತಾಳ್ಮೆ, ಸತ್ಯದಿಂದ ಬರುವ ಶಕ್ತಿಯ ಬಗ್ಗೆ ಕಲಿಯುತ್ತಿದ್ದೇನೆ. ನಾನು ಬುದ್ದಿವಂತವಾಗಿ, ಹೆಚ್ಚು ಅರಿವಿನೊಂದಿಗೆ ಜೀವನ ಮುಂದುವರಿಸಲು ಇಷ್ಟಪಡುತ್ತೇನೆ. ಈಗ ಅಧಿಕೃತವಾಗಿ ಅಧ್ಯಾಯ ಕೊನೆಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಮೂರೂವರೆ ವರ್ಷಗಳಿಗಿಂತ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿದ ಬಳಿಕ, ರಾಹುಲ್ ಇಶಾನಿಯಿಂದ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಾಹುಲ್ ಸ್ವತಃ ಈ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಇವರು 2022ರ ಮಾರ್ಚ್ 9ರಂದು ಗೋವಾದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. 26 ವರ್ಷದ ರಾಹುಲ್ ಚಹರ್ ತಮ್ಮ ಹೇಳಿಕೆಯಲ್ಲಿ ಕಾನೂನು  ಸಂಬಂಧಿತ ಪ್ರಕ್ರಿಯೆಗಳು ಈಗ ಪೂರ್ಣಗೊಂಡಿದ್ದು, ವಿಚಾರವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಅಂತಿಮಗೊಳಿಸಲಾಗಿದೆ. ತಮ್ಮ ಜೀವನ ಈ ಮೂಲಕ ಅಂತ್ಯ ಕಂಡಿದೆ ಎಂದು ಅವರು ವಿವರಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.