2026-06-08 01:23:57

Cricketer And Biggboss Contistant Dating | ಕ್ರಿಕೆಟಿಗನ ಜೊತೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಡೇಟಿಂಗ್..?‌ | Speed News Kannada

Cricketer And Biggboss Contistant Dating | ಕ್ರಿಕೆಟಿಗನ ಜೊತೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಡೇಟಿಂಗ್..?‌ | Speed News Kannada

ಟೀಂ ಇಂಡಿಯಾ ಆಟಗಾರನ ಜೊತೆ ಮಾಜಿ ಬಿಬಿ ಸ್ಪರ್ಧಿ ಡೇಟಿಂಗ್‌..? ಇಬ್ಬರು ಸೇರಿ ಮೀಟಿಂಗ್‌, ಮಾದ್ಯಮದವರ ಕಣ್ಣು ತಪ್ಪಿಸಿ ಒಳಗೆ ಎಂಟ್ರಿ. ಆರ್‌ಜೆ ಮಹ್ವಾಶ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಬಿಬಿ ಮಾಜಿ ಸ್ಪರ್ಧಿ ಜೊತೆ ಚಹಲ್ ಕಾಣಿಸಿಕೊಂಡಿದ್ದಾರೆ. ಉತ್ತಮ ಆಟಗಾರ ಎನಿಸಿಕೊಂಡ ಯಜುವೇಂದ್ರ ಚಹಾಲ್‌ ಅವರು ತಮ್ಮ ಪತ್ನಿ ಜೊತೆಗೆ ವಿಚ್ಛೇದನ ಪಡೆದ ಮೇಲೆ ಮೊಟ್ಟ ಮೊದಲ ಬಾರಿಗೆ ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಇತ್ತೀತೆಗೆ ಇನ್‌ಫ್ಲುಯೆನ್ಸರ್, ರೇಡಿಯೋ ಜಾಕಿ ಮಹ್ವಾಶ್ ಅನ್‌ಫಾಲೋ ಕೂಡ ಮಾಡಿದ್ದರು, ಈಗ ಯಜುವೇಂದ್ರ ಚಹಾಲ್ ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಡಿನ್ನರ್ ಡೇಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಮುಂಬೈ ಒಂದರ ರೆಸ್ಟೋರೆಂಟ್‌ನಲ್ಲಿ ಚಹಾಲ್‌ ಮತ್ತು ಬಿಗ ಬಾಸ್‌ ಸಿಸನ್‌ 13ರ ಸ್ಪರ್ಧಿ ಶೆಫಾಲಿ ಬಗ್ಗಾ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೋಟೆಲ್ಲಿನ ಹೊರಭಾಗದಲ್ಲಿ ಮಿಡೀಯಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಚಹಾಲ್‌ ಯಾವುದೇ ಭಯ ಇಲ್ಲದೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ, ಆದರೆ ಶೆಫಾಲಿ ಬಗ್ಗಾ ಮಾದ್ಯಮದವರ ಕಣ್ಣಿಗೆ ಬೀಳಲು ಹಿಂದೆ ಮುಂದೆ ಮಾಡಿದರು. ಯಜುವೇಂದ್ರ ಚಹಾಲ್ ಹಾಗೂ ಶೆಫಾಲಿ ಬಗ್ಗಾ ತಮ್ಮ ಭೇಟಿಯನ್ನು ಗೌಪ್ಯವಾಗಿಟ್ಟಿದ್ದಾರೆ. ಮಾಧ್ಯಮಗಳಲ್ಲಿ ಚಹಾಲ್ ಹಾಗೂ ಶೆಫಾಲಿ ಡಿನ್ನರ್ ಡೇಟಿಂಗ್ ಸುದ್ದಿ ಹರಿದಾಡುತ್ತಿದೆ. ಆದರೆ ಈ ಜೋಡಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಇಷ್ಟೇ ಅಲ್ಲ ರೆಸ್ಟೋರೆಂಟ್, ಭೇಟಿ ಕುರಿತು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿಲ್ಲ. 

ಯಜುವೇಂದ್ರ ಚಹಾಲ್ ವೈಯುಕ್ತಿಕ ಜೀವನದಲ್ಲಿ ಹಲವು ಏರಿಳಿತ ಕಂಡಿದ್ದಾರೆ. ಪ್ರಮುಖವಾಗಿ ಧನಶ್ರಿ ವರ್ಮಾ ಜೊತೆಗಿನ ಮದುವೆ ಮುರಿದು ಬಿದ್ದ ಬಳಿಕ ಏಕಾಂಗಿಯಾಗಿದ್ದ ಯಜುವೇಂದ್ರ ಚಹಾಲ್, ಆರ್‌ಜೆ ಮಹ್ವಾಶ್ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಕ್ರಿಕೆಟ್ ಮ್ಯಾಚ್ ವೀಕ್ಷಣೆ ವೇಳೆ, ರೆಸ್ಟೋರೆಂಟ್ , ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇಬ್ಬರು ಒಬ್ಬರನ್ನೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲೇ ಶೆಫಾಲಿ ಜೊತೆ ಕಾಣಿಸಿಕೊಂಡಿರುವುದು ಇದೀಗ ಚರ್ಚೆಯಾಗುತ್ತಿದೆ. 

ಯಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಅನ್‌ಫಾಲೋ ಮಾಡಿದ ಕೆಲವೇ ದಿನಗಳಲ್ಲಿ ಚಹಾಲ್ ಹಾಗೂ ಶೆಫಾಲಿ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವುದೇ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಫ್ರೀ ಬರ್ಡ್ ಚಹಾಲ್ ಇದೀಗ ಶೆಫಾಲಿ ಜೊತೆ ಟೇಟಿಂಗ್ ಶುರುವಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಧನಶ್ರೀ ವರ್ಮಾ ಜೊತೆಗಿನ ವೈವಾಹಿಕ ಜೀವನ ಮುರಿದು ಬಿದ್ದ ಬಳಿಕವೂ ವಿವಾದ ಮುಂದವರಿದಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರು ಪರೋಕ್ಷವಾಗಿ ಆರೋಪಗಳನ್ನು ಮಾಡಿಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರಗಳು ಹರಿದಾಡಿತ್ತು. ಇನ್ನು ಧನಶ್ರೀ ವರ್ಮಾ ಕೇಳಿದ ಜೀವನಾಂಶ ಕುರಿತು ಭಾರಿ ಚರ್ಚೆಯಾಗಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.