2026-04-23 09:19:16

Corporate Amendment Act introduced in Lok Sabha | ಲೋಕಸಭೆಯಲ್ಲಿ ಕಾರ್ಪೊರೇಟ್ ತಿದ್ದುಪಡಿ ಕಾಯ್ದೆ ಮಂಡನೆ ಜೆಪಿಸಿಗೆ ಪರಿಶೀಲನೆ ಹೊಣೆ | Speed News Kannada

Corporate Amendment Act introduced in Lok Sabha | ಲೋಕಸಭೆಯಲ್ಲಿ ಕಾರ್ಪೊರೇಟ್ ತಿದ್ದುಪಡಿ ಕಾಯ್ದೆ ಮಂಡನೆ ಜೆಪಿಸಿಗೆ ಪರಿಶೀಲನೆ ಹೊಣೆ | Speed News Kannada

ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಚರಣ ಸೋಮವಾರದಿಂದ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ತಿದ್ದುಪಡಿ ಕಾಯ್ದೆ 2026 ಅನ್ನು ಮಂಡಿಸಿದರು. ಇದರ ವಿವರವಾದ ಪರಿಶೀಲನೆಗೆ ಜಂಟಿ ಸದನ ಸಮಿತಿಗೆ ಕಳುಹಿಸುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿತು. 2013ರ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆ ಹಾಗೂ 2008ರ ಕಂಪನಿ ಕಾಯ್ದೆಯಡಿ ಇನ್ನಷ್ಟು ತಿದ್ದುಪಡಿಯನ್ನು ಮಸೂದೆ ಬಯಸಿದೆ.
ಲೋಕಸಭಾ ಪ್ರಧಾನ ಕಾರ್ಯದರ್ಶಿ ಅವರು ಹಂಚಿಕೊಂಡಿರುವ ದಿನದ ಚರ್ಚೆಗಳ ಪಟ್ಟಿಯಲ್ಲಿ ಈ ತಿದ್ದುಪಡಿ ಮಸೂದೆ ಮಂಡನೆಯೂ ಒಳಗೊಂಡಿದೆ. ಈ ಉದ್ದೇಶಿತ ಕಾಯ್ದೆಯು 2026-27ನೇ ಸಾಲಿನಲ್ಲೇ ಕಾನೂನಾಗಿ ಜಾರಿಗೆ ಬರಲಿದೆ. ಇದೇ ಸಂದರ್ಭದಲ್ಲಿ ಸಂಸದೆ ಡಿ.ಪುರಂದರೇಶ್ವರಿ ಹಾಗೂ ಶೋಭನಾಬೆನ್ ಬರಾಯಿಯಾ ಅವರು ಮಹಿಳಾ ಸಬಲೀಕರಣ ಮಸೂದೆಯನ್ನು ಮಂಡಿಸಲಿದ್ದಾರೆ. 'ಸೈಬರ್ ಅಪರಾಧ ಮತ್ತು ಮಹಿಳೆಯರಿಗೆ ಸೈಬರ್ ರಕ್ಷಣೆ ವಿಷಯವಾಗಿದೆ.
ತೆಲುಗು ದೇಶಂ ಪಾರ್ಟಿಯ ಮಗುಂಟಾ ಶ್ರೀನಿವಾಸುಲು ರೆಡ್ಡಿ ಮತ್ತು ವೈಎಸ್‌ಆರ್‌ಸಿಪಿ ಸಂಸದೆ ಗುಮ್ಮ ತನುಜನಾ ರಾಣಿ ಅವರು ವಸತಿ ಮತ್ತು ನಗರಾಭಿವೃದ್ಧಿ ವಿಷಯ ಕುರಿತು ಸ್ಥಾಯಿ ಸಮಿತಿ ಎದುರು ಹೇಳಿಕೆ ದಾಖಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.