2026-03-07 01:14:07

Continuation of Nalikali Project | ನಲಿಕಲಿ ಯೋಜನೆಯನ್ನು ಮುಂದುವರಿಕೆ ಮರುಚಿಂತನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ | Speed News Kannada

Continuation of Nalikali Project | ನಲಿಕಲಿ ಯೋಜನೆಯನ್ನು ಮುಂದುವರಿಕೆ ಮರುಚಿಂತನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ | Speed News Kannada

ಬೆಂಗಳೂರು: ನಲಿಕಲಿ ಯೋಜನೆಯನ್ನು ಮುಂದುವರಿಸುವ ಬಗ್ಗೆ ಶಿಕ್ಷಣ ಇಲಾಖೆ ಮರುಚಿಂತನೆ ನಡೆಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಭಾವಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಅನುಕೂಲವಾಗುವಂತೆ, ಪ್ರಸ್ತುತ ವರದಿಯನ್ನು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಸಲ್ಲಿಸಿದ್ದಾರೆ. 
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀಹ, ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಹಾಜರಿದ್ದರು.
ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸಲು ನಲಿ ಕಲಿ ಯೋಜನೆಯನ್ನು 1995 ರಲ್ಲೇ ಜಾರಿಗೆ ತರಲಾಗಿದೆ. ನಲಿಕಲಿ ಯೋಜನೆಯ ಪರಿಕಲ್ಪನೆಯು ಬಹಳ ಚೆನ್ನಾಗಿದ್ದರೂ ಅನುಷ್ಠಾನದಲ್ಲಿ ಅದು ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಯೋಜನೆಯ ವೈಫಲ್ಯಕ್ಕೆ ಸಂಬಂಧಿಸಿದಂತೆ, ಪ್ರಾಧಿಕಾರದ ವರದಿಯು ಕೆಳಗಿನ ಅಂಶಗಳನ್ನು ಗುರುತಿಸಿದೆ. 
ಈಡೇರದ ಉದ್ದೇಶಗಳು:
1.ನಲಿಕಲಿ ಯೋಜನೆಯ ೮೦ ನಿಮಿಷಗಳ ಒಂದು ಅವಧಿಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. ತರಬೇತಿ ಪಡೆದ ಅಧ್ಯಾಪಕರು ನಿವೃತ್ತರಾದಾಗ ಅವರ ಜಾಗದಲ್ಲಿ ನೇಮಕಗೊಂಡ ಅತಿಥಿ ಅಧ್ಯಾಪಕರಿಗೆ ಸೂಕ್ತವಾದ ತರಬೇತಿ ಸಿಗದ್ದರಿಂದ ನಿರೀಕ್ಷಿತ ಪರಿಣಾಮ ಲಭಿಸಲಿಲ್ಲ. 
2.  ಒಂದರಿಂದ ಮೂರನೇ ತರಗತಿಯವರೆಗಿನ ಮಕ್ಕಳ ವಯಸ್ಸು,  ಕಲಿಕಾ ಮಟ್ಟ ಮತ್ತು ಕಲಿಕಾ ಸಾಮರ್ಥ್ಯ ಒಂದೇ ರೀತಿ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಬಹು ವರ್ಗಬೋಧನೆಯನ್ನು ಅರ್ಥಪೂರ್ಣಗೊಳಿಸಲು ಬೇಕಾದ ಗುಂಪು ರಚನೆ ಹಾಗೂ ನಿರ್ವಹಣೆಯ ವಿಷಯದಲ್ಲಿ ಅಧ್ಯಾಪಕರು ವಿಫಲರಾಗಿದ್ದಾರೆ. 
3. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವ ತರಗತಿಗಳಲ್ಲಿ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ. 
4. ತರಗತಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಅಗತ್ಯವಿದ್ದ ಕಲಿಕಾ ಸಾಮಗ್ರಿಗಳನ್ನು ಸಮರ್ಪಕವಾಗಿ ಹಲವು ಶಾಲೆಗಳಿಗೆ ಪೂರೈಕೆ ಆಗಿಲ್ಲ. 
3. ಮೂರು ಕ್ಲಾಸಿಗೆ ಒಬ್ರೇ ಶಿಕ್ಷಕರಾ?ʼ ಎಂದು ಪೋಷಕರು ಸಾಮಾನ್ಯವಾಗಿ ಉದ್ಗರಿಸುತ್ತಾರೆ. ಅವರಿಗೆ ನಲಿಕಲಿ ಯೋಜನೆಯ ಮಹತ್ವ ತಿಳಿದಿರುವುದಿಲ್ಲ. ಅಂಥವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದ್ದಾರೆ. ಇದರಿಂದಾಗಿ ಸರಕಾರೀ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗಿದೆ. 
4. ವಿದ್ಯಾರ್ಥಿಗಳ ಪ್ರಗತಿಯನ್ನು ನಿರಂತರವಾಗಿ ದಾಖಲಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಶ್ರಮದಾಯಕವಾದ ಕೆಲಸ. ಅನೇಕ ಕೆಲಸಗಳಲ್ಲಿ ಮಗ್ನರಾದ ಶಿಕ್ಷಕರಿಗೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿಲ್ಲ. 
5. ಗ್ರಾಮೀಣ ಪರಿಸರದ ಸರ್ಕಾರಿ ಶಾಲೆಗಳಲ್ಲಿ ಹಲವು ತರಗತಿ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕಲಿಯುವುದು ಮಕ್ಕಳಿಗೆ ಅಸಾಧ್ಯವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.