2026-07-26 01:41:33

COMMONWEALTH GAMES | ವೈಕಲ್ಯ ಮೆಟ್ಟಿ ಸಾಧನೆಗೈದ ಝಂಡುಕುಮಾರ್‌ ಕಾಮನ್ವೆಲ್ತ್‌ ನಲ್ಲಿ ಭಾರತಕ್ಕೆ ಮೊದಲ ಕಂಚು | SNK

COMMONWEALTH GAMES | ವೈಕಲ್ಯ ಮೆಟ್ಟಿ ಸಾಧನೆಗೈದ ಝಂಡುಕುಮಾರ್‌ ಕಾಮನ್ವೆಲ್ತ್‌ ನಲ್ಲಿ ಭಾರತಕ್ಕೆ ಮೊದಲ ಕಂಚು | SNK

ಗ್ಲ್ಯಾಸ್ಗೊ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತವು ತನ್ನ ಪದಕದ ಖಾತೆಯನ್ನು ತೆರೆದಿದೆ. ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಝಂಡು ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪೋಲಿಯೊ ಪೀಡಿತರಾಗಿರುವ 28 ವರ್ಷದ ಝಂಡು ಕುಮಾರ್ ತಮ್ಮ ಮೊದಲ ಯತ್ನದಲ್ಲಿ 181 ಕೆಜಿ ಹಾಗೂ ಎರಡನೇ ಯತ್ನದಲ್ಲಿ 190 ಕೆಜಿ ತೂಕವನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 196 ಕೆಜಿ ಎತ್ತುವಲ್ಲಿ ವಿಫಲರಾದರೂ, ಒಟ್ಟು 130.9 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನದೊಂದಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಈ ವಿಭಾಗದಲ್ಲಿ ನೈಜೀರಿಯಾದ ಇಡ್ರಿಸ್ ರಿಲುವಾನ್ (132.8 ಪಾಯಿಂಟ್ಸ್) ಚಿನ್ನದ ಪದಕ ಹಾಗೂ ಬ್ರಿಟನ್‌ನ ಮ್ಯಾಥ್ಯೂ ಹಾರ್ಡಿಂಗ್ (131 ಪಾಯಿಂಟ್ಸ್) ಬೆಳ್ಳಿ ಪದಕ ಪಡೆದುಕೊಂಡರು. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಕ್ರೀಡಾಪಟು ಸುಧೀರ್ 114.1 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಕ್ರೀಡಾಕೂಟದ ಮೊದಲ ದಿನ ಭಾರತದ ಪ್ಯಾರಾ ಪವರ್‌ಲಿಫ್ಟರ್ ಅಶೋಕ್ ಮಲಿಕ್ ನಾಲ್ಕನೇ ಸ್ಥಾನಕ್ಕೆ ಕುಸಿದು ಪದಕ ಕೈತಪ್ಪಿಸಿಕೊಂಡಿದ್ದರು. ಇದೀಗ ಝಂಡು ಕುಮಾರ್ ಅವರ ಈ ಗೆಲುವು ಭಾರತೀಯ ಕ್ರೀಡಾಪಡೆಯಲ್ಲಿ ಹೊಸ ಭರವಸೆ ಮೂಡಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.