2026-06-08 02:44:00

Colombian fighter jet crashes: 66 soldiers killed|ಕೊಲಂಬಿಯಾ ಯುದ್ಧ ವಿಮಾನ ಪತನ: 66 ಯೋಧರು ಸಾವು|Speed news kannada

Colombian fighter jet crashes: 66 soldiers killed|ಕೊಲಂಬಿಯಾ ಯುದ್ಧ ವಿಮಾನ ಪತನ: 66 ಯೋಧರು ಸಾವು|Speed news kannada

125 ಜನ ಯೋಧರನ್ನು ಕರೆದುಕೊಂಡು ಹೋಗುತ್ತಿದ್ದ ಕೊಲಂಬಿಯಾ ವಾಯುಪಡೆಯ ಯುದ್ದ ವಿಮಾನ ಪತನವಾಗಿದೆ. ಟೇಕಾಫ್‌ ಆದ ಕೆಲವೇ ಸಮಯದಲ್ಲಿ ದಕ್ಷಿಣ ಅಮೆಜಾನ್‌ ಪ್ರದೇಶದಲ್ಲಿ ಪತನಗೊಂಡಿದ್ದೆ. ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು ಪೆರುವಿನ ಗಡಿಯಲ್ಲಿರುವ ಪೋರ್ಟೊ ಲೆಗುಯಿಜಾಮೊದಿಂದ ಹಾರುತ್ತಿದ್ದಾಗ  ಈ ಘಟನೆ ಸಂಭವಿಸಿದೆ ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.ಯುದ್ಧ ವಿಮಾನವು ಮದ್ದುಗುಂಡುಗಳನ್ನು ಹೊತ್ತುಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ. ಇನ್ನೂ ಯುದ್ಧ ವಿಮಾನದಲ್ಲಿದ್ದ 125 ಯೋಧರ ಪೈಕಿ 66 ಯೋಧರು ಸಾವನಪ್ಪಿದ್ದು, ಇನ್ನೂ 12 ಜನ ಯೋಧರಿಗೆ ಗಂಭೀರ ಗಾಯಗಳಾಗಿವೆ. ಯುದ್ಧ ವಿಮಾನ ಟೇಕಾಫ್‌ ಆಗಿ ಸ್ವಲ್ಪ ಸಮಯದಲ್ಲೇ ನೆಲಕ್ಕೆ ಅಪ್ಪಳಿಸಿದ್ದರಿಂದ ಅದು ಸ್ಫೋಟಗೊಂಡು ಅದರ ಪರಿಣಾಮವಾಗಿ ವಿಮಾನವು ಬೆಂಕಿಗೆ ಆಹುತಿಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.