2026-06-08 03:53:40

CM post goes to BJP | ಬಿಹಾರ ನಿತೀಶ್‌ ಕುಮಾರ್‌ ರಾಜ್ಯಸಭೆಗೆ ಸಿಎಂ ಹುದ್ದೆ ಬಿಜೆಪಿ ಮಡಿಲಿಗೆ | Speed News Kannada

CM post goes to BJP | ಬಿಹಾರ ನಿತೀಶ್‌ ಕುಮಾರ್‌ ರಾಜ್ಯಸಭೆಗೆ ಸಿಎಂ ಹುದ್ದೆ ಬಿಜೆಪಿ ಮಡಿಲಿಗೆ | Speed News Kannada

ಪಟನಾ: ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ನಿತೀಶ ಕುಮಾರ್‌ ಅವರು ರಾಜ್ಯಸಭೆಗೆ ಹೋಗಲಿದ್ದು, ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
ನಿತೀಶ್‌ ಕುಮಾರ್‌ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಾಮಪತ್ರ ಸಿದ್ದವಾಗಿದ್ದು ಸಹಿಯಷ್ಟೇ ಹಾಕಬೇಕಿದೆ. ಬಲ್ಲ ಮೂಲಗಳ ಪ್ರಕಾರ ಮಾರ್ಚ್‌ 5 ರಂದು ನಾಮಪತ್ರ ಸಲ್ಲಿಸಲಿದ್ದಾರೆ. 
ಹಾಗಾದರೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸಿಎಂ ಪೋಸ್ಟ್‌ ಬಿಜೆಪಿ ಪಾಲಾಗುತ್ತದೆ ಮತ್ತು ಜೆಡಿಯುಗೆ ಡಿಸಿಎಂ ಹುದ್ದೆ ಲಭ್ಯವಾಗುತ್ತದೆ. ನಿಶಾಂತ್‌ ಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೊದಲ ಬಾರಿಗೆ ಬಿಹಾರ ಬಿಜೆಪಿ ಮುಖ್ಯಮಂತ್ರಿಯನ್ನು ಕಾಣಲಿದೆ.
ಇತ್ತೀಚೆಗೆ ಮಾತನಾಡಿದ ಪಕ್ಷದ ಮುಖಂಡ ಶ್ರವಣ್ ಕುಮಾರ್, ಹೋಳಿ ಹಬ್ಬದ ಸಂದರ್ಭದಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಶೀಘ್ರದಲ್ಲೇ ಸಕ್ರಿಯ ರಾಜಕೀಯಕ್ಕೆ ಕಾಲಿಡಲಿದ್ದಾರೆ. ಆ ಮೂಲಕ ಅವರನ್ನು ಸಾರ್ವಜನಿಕ ಜೀವನದಲ್ಲಿ ಕಾಣಲು ಬಯಸುವ ಅನೇಕ ಯುವಕರ ಬಹುಕಾಲದ ಆಸೆ ಈಡೇರುತ್ತದೆ. ಎಂದು ಹೇಳಿದ್ದರು.
ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ  ಒಕ್ಕೂಟ 200 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ 89 ಮತ್ತು ಜೆಡಿಯು 85 ಸ್ಥಾನಗಳನ್ನು ಗಳಿಸಿದ್ದವು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.