2026-07-23 08:23:33

Class 12 Board Exam Chemistry Paper Leak | 12 ನೇ ತರಗತಿ ಬೋರ್ಡ್ ಪರೀಕ್ಷೆ ಕೆಮಿಸ್ಟ್ರಿ ಪೇಪರ್ ಲೀಕ್ | Speed News Kannada

Class 12 Board Exam Chemistry Paper Leak | 12 ನೇ ತರಗತಿ ಬೋರ್ಡ್ ಪರೀಕ್ಷೆ ಕೆಮಿಸ್ಟ್ರಿ ಪೇಪರ್ ಲೀಕ್ | Speed News Kannada

ಮುಂಬೈ: ಪ್ರಸ್ತುತ ನಡೆಯುತ್ತಿರುವ ಮಹಾರಾಷ್ಟ್ರದ  12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ನಡುವೆ ನಾಗುರದ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಪರೀಕ್ಷೆಗೆ ಒಂದು ಗಂಟೆ ಮೊದಲು ಮಹಾರಾಷ್ಟ್ರ ಬೋರ್ಡ್ ಎಚ್‌ಎಸ್‌ಸಿ ರಸಾಯನಶಾಸ್ತ್ರ, ಪತ್ರಿಕೆಯನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಲಾಗಿದೆ. ಈ ಆರೋಪ ಕೇಳಿಬರುತ್ತಲೇ ಪೊಲೀಸರು ಶಂಕಿತ ಸೋರಿಕೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ ಬೋರ್ಡ್ ಎಚ್‌ಎಸ್‌ಸಿ, 12 ನೇ ತರಗತಿ ರಸಾಯನಶಾಸ್ತ್ರ, ಪರೀಕ್ಷೆಯನ್ನು ಫೆಬ್ರವರಿ 18 ರಂದು ನಡೆಸಲಾಯಿತು. ನಾಗುರದ ಸೇಂಟ್ ಉರ್ಸುಲಾ ಬಾಲಕಿಯರ ಪ್ರೌಢಶಾಲೆ ಮತ್ತು ಜೂನಿಯ‌ರ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವರದಿಯಾಗಿದೆ. ಅಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ಮಾರ್ಟ್‌ ಫೋನ್‌ನಲ್ಲಿ ವಾಟ್ಸಾಪ್ ಅನ್ನು ಬಳಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ.
ಪೊಲೀಸರು ತನಿಖೆ ಆರಂಭಿಸಿದ್ದು, ಖಾಸಗಿ ಬೋಧನಾ ಕೇಂದ್ರದ ಶಿಕ್ಷಕರೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣ ಎಂದು ತಿಳಿದುಬಂದಿದೆ ಮತ್ತು ಸುಮಾರು 13 ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಪರಿಹರಿಸುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಎಚ್‌ಎಸ್‌ಸಿ ರಸಾಯನಶಾಸ್ತ್ರ, ಮಾತ್ರವಲ್ಲದೆ, ಎಚ್‌ಎಸ್‌ಸಿ ಭೌತಶಾಸ್ತ್ರ ಪ್ರಶ್ನೆಪತ್ರಿಕೆಯನ್ನು ಸಹ ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಮಹಾರಾಷ್ಟ್ರ, ಎಚ್‌ಎಸ್‌ಸಿ ಪರೀಕ್ಷೆ ಫೆಬ್ರವರಿ 10 ರಿಂದ ಮಾರ್ಚ್ 11 ರವರೆಗೆ ಮತ್ತು ಎಸ್‌ಎಸ್‌ಸಿ (10 ನೇ ತರಗತಿ) ಪರೀಕ್ಷೆ ಫೆಬ್ರವರಿ 20 ರಿಂದ ಮಾರ್ಚ್ 18 ರವರೆಗೆ ನಡೆಯಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.