2026-03-07 05:52:22

CJ Roy Dead? Kerala Election Link..? | ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್..? | Speed News Kannada

CJ Roy Dead? Kerala Election Link..? | ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್..?  | Speed News Kannada

ಕೇರಳ ಚುನಾವಣೆ ಕಾರಣ ಐಟಿ ಅಧಿಕಾರಿಗಳ ಸರ್ಚ್ ನಡೆದಿತ್ತಾ..? ಸಿಜೆ ರಾಯ್ ಬೆಂಗಳೂರಿನ ಕಚೇರಿಯಲ್ಲಿ ಪಿಸ್ತೂಲ್ ಮೂಲಕ ಗುಂಡು ಹಾರಿಸಿಕೊಂಡು ಸೂಸೈಡ್‌ ಮಾಡಿಕೊಂಡಿದ್ದರು. ಬೆಂಗಳೂರಿನ ಲ್ಯಾಂಡ್‌ಫೋರ್ಡ್ ಕಚೇರಿಗೆ ಕೇರಳ ಐಟಿ ಅಧಿಕಾರಿಗಳು ದಾಳಿ ಮಾಡಿ ತಲಾಶ್ ಮಾಡಿದ್ದರು. ಮೂರು ದಿನಗಳಿಂದ ಸತತವಾಗಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು, ಆಸ್ತಿಗಳ ಮೇಲೆ ಕೇರಳ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸ್ತಾನೇ ಇದ್ದರು. ಇದೇ ಕೇರಳ ಐಟಿ ತಂಡ ಕಳೆದ ಒಂದು ತಿಂಗಳಿನಿಂದ ಕೇರಳದಲ್ಲಿ ಸಿಜೆ ರಾಯ್ ಅವರ ವ್ಯವಹಾರ, ಹಣ ವರ್ಗಾವಣೆ ಕುರಿತು ಸಂಪೂರ್ಣ ನಿಗಾ ಇಟ್ಟಿತ್ತು. ಕಾರಣ ಕೇರಳ ಚುನಾವಣೆಗೆ ಸಿಜೆ ರಾಯ್ ಅವರಿಂದ ರಾಜಕೀಯ ನಾಯಕರು, ಪಕ್ಷಗಳು ಫಂಡಿಂಗ್ ಪಡೆದುಕೊಳ್ಳುತ್ತಿದೆ ಅನ್ನೋ ಆರೋಪ ಮೇಲಿಂದ ಮೇಲೆ ಕೇಳಿಬಂದಿತ್ತು. ಹೀಗಾಗಿ ಕೇರಳ ಐಟಿ ಅಧಿಕಾರಿಗಳು ಸತತವಾಗಿ ಶೋಧ ಕಾರ್ಯ ಆರಂಭಿಸಿದ್ದರು ಅಂತ ಮಾಹಿತಿ ಈಗ ಹೋರ ಬಂದಿದೆ.

ಕಳೆದ ಕೆಲ ಚುನಾವಣೆಗೆ ಫಂಡಿಂಗ್ ಮಾಡಿರುವ ಕುರಿತು ಅನುಮಾನ ವ್ಯಕ್ತವಾಗ್ತಾ ಇರುವಂತದ್ದು. ಕಳೆದ ಕೆಲ ಚುನಾವಣೆಗಳಿಗೆ ಉದ್ಯಮಿ ಸಿಜೆ ರಾಯ್ ರಾಜಕೀಯ ನಾಯಕರು, ಪಕ್ಷಗಳಿಗೆ ಫಂಡಿಂಗ್ ಮಾಡಿರುವುದಾಗಿ ವರದಿಯಾಗಿದೆ. ಇದೇ ಕಾರಣದಿಂದ ಈ ಬಾರಿಯ ಚುನಾವಣೆಗೂ ಸಿಜೆ ರಾಯ್ ಮೂಲಕ ಫಂಡಿಂಗ್ ಸಾಧ್ಯತೆಗಳ ಕುರಿತು ಮಾಹಿತಿಗಳು ಐಟಿ ಅಧಿಕಾರಿಗಳಿಗೆ ರವಾನೆಯಾಗಿತ್ತು ಅಂತ ಹೇಳಲಾಗುತ್ತಿದೆ. ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಐಟಿ ಅಧಿಕಾರಿಗಳ ದಾಖಲೆ ಪತ್ರಗಳ ಪರಿಶೋಧನೆ ತೀವ್ರಗೊಳಿಸಿದ್ದಾರೆ. ಕೇರಳದಲ್ಲಿ ಕಾನ್ಫಿಡೆಂಟ್ ಗ್ರೂಪ್ ನಿರ್ಮಾಣ ಮಾಡಿದ ಫ್ಲ್ಯಾಟ್‌ಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಾಗಿದೆ. ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಯಲ್ಲಿ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕೇರಳ ಚುನಾವಣೆ ಸಮೀಪಿಸುತ್ತಿದ್ದಂತೆ ಈ ನಡೆ ಅನುಮಾನ ಮೂಡಿಸಿದೆ. ಇನ್ನು ಮಾರಾಟ ಮಾಡುವಾಗ ಹಣ ವ್ಯವಹಾರಗಳು ಬಹುತೇಕ ನಗದು ಮೂಲಕ ನಡೆದಿದೆ. ಇದು ಕೂಡ ಐಟಿ ಅಧಿಕಾರಿಗಳ ಅನುಮಾನ ಹೆಚ್ಚಿಸಿದೆ. ತೆರಿಗೆ ವಂಚಿಸಲು ಸಿಜೆ ರಾಯ್ ನಗದು ವ್ಯವಹಾರ ಮಾಡಿದ್ದಾರೆ ಅನ್ನೋದರ ಜೊತೆಗೆ ಕೇರಳ ಚುನಾವಣೆ ಲಿಂಕ್ ಕೂಡ ಇದರ ಹಿಂದಿತ್ತಾ ಅನ್ನೋ ಕುರಿತು ಐಟಿ ಅಧಿಕಾರಿಗಳು ತನಿಖೆ ಚುರುಗೊಳಿಸಿದ್ದಾರೆ.

ಇತ್ತ ಬೆಂಗಳೂರು ಪೊಲೀಸರ ತನಿಖೆ ಚುರುಕುಗೊಂಡಿದೆ. ಉದ್ಯಮಿ ಸಿಜೆ ರಾಯ್ ಸಾವು ಪ್ರಕರಣದ ಕುರಿತು ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಸಿಜೆ ರಾಯ್ ಕಚೇರಿಯ ಕೋಣೆಯೊಳಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಎದೆ ಮೇಲೆ ಗನ್ ಇಟ್ಟು ಶೂಟ್ ಮಾಡಿರುವುದು ವರದಿಯಲ್ಲಿ ಪತ್ತೆಯಾಗಿದೆ. ಎದೆಯ ಮೇಲ್ಬಾಗದ ಮಾಸಖಂಡಗಳು ಚದುರಿಲ್ಲ. ಇದು ಕ್ಲೋಸ್ ಡಿಸ್ಟೆನ್ಸ್‌ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಎದೆಯ ಒಳಭಾಗಕ್ಕೆ ಇಳಿದಿದೆ. ಸಿಜೆ ರಾಯ್ ಬಲಗೈಯಲ್ಲಿ ಗನ್ ಹಿಡಿದು ಎದೆಯ ಮೇಲಿಟ್ಟು ಗುಂಡು ಹಾರಿಸಿದ್ದಾರೆ ಎಂದು ವೈದ್ಯರ ವರದಿಗಳು ಹೇಳುತ್ತಿದೆ.ವೈದ್ಯರು ಹಾಗೂ ಎಫ್ಎಸ್ಎಲ್ ತಂಡದಿಂದ ಮೃತದೇಹ‌ ಪರಿಶೀಲನೆ ಮಾಡಿ ವರದಿ ತಯಾರಿಸಿದ್ದಾರೆ. ಸಿಜೆ ರಾಯ್ ಫೈರಿಂಗ್ ಮಾಡಿರುವ ಪಿಸ್ತೂಲ್ ಲೈಸೆನ್ಸ್ ಗನ್. ಯಾವತ್ತೂ ಈ ಪಿಸ್ತೂಲ್ ಸಿಜೆ ರಾಯ್ ಇಟ್ಟುಕೊಂಡಿರುತ್ತಿದ್ದರು. ಶ್ರೀಮಂತ ಉದ್ಯಮಿಯಾಗಿರುವ ಕಾರಣ ಲೈಸೆನ್ಸ್ ಪಿಸ್ತೂಲ್ ಪಡೆದುಕೊಂಡಿದ್ದಾರೆ. 

ಬೆಂಗಳೂರು ಉದ್ಯಮಿ ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್? ಸ್ಫೋಟಕ ತಿರುವು? ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸಿಜೆ ರಾಯ್ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಕಣ್ಣಿಟ್ಟಿದ್ದರು. ದಾಳಿ ವೇಳೆ ಪತ್ತೆಯಾಗಿರುವ ದಾಖಲೆಗಳು ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.