2026-06-25 02:03:32

CJ Roy Committed Suicide | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳೇ ಹೆಚ್ಚು: ಎಸ್‌ ಐಟಿ ಮೂಲಗಳ ಶಂಕೆ | Speed News Kannada

CJ Roy Committed Suicide | ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳೇ ಹೆಚ್ಚು: ಎಸ್‌ ಐಟಿ ಮೂಲಗಳ ಶಂಕೆ | Speed News Kannada

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಇವರ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಭಿಪ್ರಾಯಪಟ್ಟಿದೆ. ಇಂಗ್ಲೀಷ್‌ ಪತ್ರಿಕೆಯೊಂದು ಎಸ್‌ ಐಟಿ ಮೂಲಗಳನ್ನು ಆಧರಿಸಿ ಈ ವರದಿ ಮಾಡಿದೆ.  ರಾಯ್‌ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಅಥವಾ ಡೈರಿ ಪತ್ತೆಯಾಗಿಲ್ಲ, ಪ್ರಾಥಮಿಕ ಸಾಕ್ಷ್ಯಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. 
ರಾಯ್ ಅವರ ಕಚೇರಿ ಕ್ಯಾಬಿನ್ ನಲ್ಲಿ ಅವರು ಕುಳಿತುಕೊಳ್ಳುತ್ತಿದ್ದ ಕುರ್ಚಿಯ ಕೆಳಗೆ ಪಿಸ್ತೂಲ್ ಮತ್ತು ಜೀವಂತ ಕಾರ್ಟ್ರಿಡ್ಜ್ ಪತ್ತೆಯಾಗಿದೆ. ಘಟನೆಗೂ ಮುನ್ನ ಅಥವಾ ನಂತರ ಯಾರೊಬ್ಬರೂ ಕ್ಯಾಬಿನ್‌ ಪ್ರವೇಶಿಸಿರುವ ಕುರುಹುಗಳು ಕಂಡು ಬಂದಿಲ್ಲ. 
ಸ್ಥಳ ಪರಿಶೀಲನೆ ನಡೆಸುವಾಗ ಡೆತ್‌ ನೋಟ್‌ ಪತ್ತೆಯಾಗಿಲ್ಲ.  ಇವರ ಕಚೇರಿಯ ಆವರಣದಲ್ಲಿದ್ದ  ಸಿಸಿಟಿವಿ ದೃಶ್ಯಾವಳಿಗಳು ಹಾಗೂ ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಲು 48 ಗಂಟೆಗಳಿಗೂ ಹೆಚ್ಚು ಕಾಲ ಶೋಧ ನಡೆಸಲಾಯಿತು ಎಂದು ಆ ಅಧಿಕಾರಿ ತಿಳಿಸಿದ್ದಾರೆ..
ರಾಯ್ ಅವರು ಆತ್ಮಹತ್ಯೆಗೆ ಶರಣಾಗಲು ಕಾರಣವಾದ ಸಂದರ್ಭಗಳನ್ನು ತಿಳಿದುಕೊಳ್ಳಲು ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಲು ಎಸ್‌ಐಟಿಗೆ ಮುಕ್ತ ಹಸ್ತ ನೀಡಲಾಗಿದೆ ಎಂದೂ ತಿಳಿದು ಬಂದಿದೆ.
ಎಸ್‌ಐಟಿ ಅಧಿಕಾರಿಗಳು ರಾಯ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಒಂಬತ್ತು ಪುಟಗಳ ಡೆತ್ ನೋಟ್ ಮತ್ತು 20 ಪುಟಗಳ ಡೈರಿ ಪತ್ತೆಯಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ತನಿಖೆಯ ನಂತರವಷ್ಟೇ ರಾಯ್‌ ಅವರ ಸಾವಿನ ರಹಸ್ಯ ಬಯಲಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.