2026-06-08 06:59:25

Chinese Womans True Colors Revealed | ಫಿಲ್ಟರ್ ಕ್ರಾಶ್ ಲಕ್ಷಾಂತರ ಫಾಲೋವರ್ಸ್ ಮಟಾಶ್ ಚೀನಿ ಮಹಿಳೆಯ ನಿಜ ಬಣ್ಣ ಬಯಲು | Speed News Kannada

Chinese Womans True Colors Revealed | ಫಿಲ್ಟರ್ ಕ್ರಾಶ್ ಲಕ್ಷಾಂತರ ಫಾಲೋವರ್ಸ್ ಮಟಾಶ್ ಚೀನಿ ಮಹಿಳೆಯ ನಿಜ ಬಣ್ಣ ಬಯಲು | Speed News Kannada

ಚೀನಾ: ಸೋಶಿಯಲ್ ಮೀಡಿಯಾದಲ್ಲಿ ಅನಿಮೆ ಶೈಲಿಯ ಮುಖದ ಫಿಲ್ಟರ್ (Filter) ಬಳಸಿ ಯುವತಿಯಂತೆ ಕಾಣಿಸಿಕೊಂಡಿದ್ದ ಚೈನಾ ಮಹಿಳೆಯ ಬಣ್ಣ ಬಯಲಾಗಿದೆ. ನವಯುವತಿಯಂತೆ ಪೋಸ್ ಕೊಟ್ಟು ದೊಡ್ಡ ಪ್ರಮಾಣದ ಫಾಲೋವರ್ಸ್ ಮತ್ತು ದೇಣಿಗೆಗಳನ್ನು ಗಳಿಸಿದ್ದ ಸ್ಟ್ರೀಮರ್ ಒಬ್ಬರ ವಿಡಿಯೋ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.ಎಲ್ಲಾ ಕ್ಯಾಶ್.. ಫಾಲೋವರ್ಸ್ ಮಟಾಶ್!
ಲೈವ್ ಸ್ಟ್ರೀಮ್ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಫಿಲ್ಟರ್ ಕ್ರಾಶ್ ಆಗಿ, ನಿಜವಾದ ಮುಖ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದೆ. ಈ ಕ್ಷಣದ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, "ಫಿಲ್ಟರ್‌ಗಳು ನಮ್ಮನ್ನು ಮೋಸಗೊಳಿಸಿದವೆಯೇ?" ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಆಕೆಯ ವಯಸ್ಸು 58 ವರ್ಷ ಎಂದು ಹೇಳಲಾಗಿದೆ. ಆದರೆ ಸ್ಟ್ರೀಮರ್ ತಮ್ಮ ವಯಸ್ಸು 30ರ ಆರಂಭವಷ್ಟೆ ಎಂದು ಹೇಳಿಕೊಂಡಿದ್ದು, ಆ ದಿನ ಆರೋಗ್ಯ ಸರಿಯಾಗಿರಲಿಲ್ಲದ ಕಾರಣ ಸ್ವಲ್ಪ ಬೇರೆ ರೀತಿಯಲ್ಲಿ ಕಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸೋಷಿಯಲ್‌ ಮೀಡಿಯಾದಿಂದ ಎಕ್ಸಿಟ್!
ವೈರಲ್ ಆದ ಕೆಲ ದಿನಗಳ ಬಳಿಕ ಆ ಯೂಟ್ಯೂಬರ್ ಬಹುತೇಕ ಸಾಮಾಜಿಕ ಜಾಲತಾಣ ಖಾತೆಗಳಿಂದ ಮಾಯವಾಗಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಟರ್‌ಗಳ ಬಳಕೆ, ನೈಜತೆ ಮತ್ತು ಪ್ರಾಮಾಣಿಕತೆ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.
ಸೋಶಿಯಲ್ ಮೀಡಿಯಾ ಯುಗದಲ್ಲಿ ಡಿಜಿಟಲ್ ಇಮೇಜ್ ಮತ್ತು ನಿಜವಾದ ವ್ಯಕ್ತಿತ್ವದ ನಡುವಿನ ಅಂತರ ಎಷ್ಟು ಎನ್ನುವ ಪ್ರಶ್ನೆಗೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.