2026-06-08 03:57:49

Chinese chemical found on seized Iranian ship | ಅಮೆರಿಕ ವಶಪಡಿಸಿಕೊಂಡ ಇರಾನ್ ಹಡಗಿನಲ್ಲಿ ಚೀನಾದ ರಾಸಾಯನಿಕ ಪತ್ತೆ ಅಮೆರಿಕ ಕಿಡಿ | Speed News Kannada

Chinese chemical found on seized Iranian ship | ಅಮೆರಿಕ ವಶಪಡಿಸಿಕೊಂಡ ಇರಾನ್ ಹಡಗಿನಲ್ಲಿ ಚೀನಾದ ರಾಸಾಯನಿಕ ಪತ್ತೆ ಅಮೆರಿಕ ಕಿಡಿ | Speed News Kannada

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ಸದಸ್ಯೆ ನಿಕ್ಕಿ ಹ್ಯಾಲೆ, ಅಮೆರಿಕದ ದಿಗ್ಧಂಧನ ಹೇರಿದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆ ವಶಪಡಿಸಿಕೊಂಡ ಮೊದಲ ಇರಾನಿನ ಹಡಗು ಚೀನಾದಿಂದ ಆಗಮಿಸಿದ್ದು, ಅದರಲ್ಲಿ ಕ್ಷಿಪಣಿಗಳಿಗೆ ಬಳಸುವ ರಾಸಾಯನಿಕ ಸಾಗಿಸುತ್ತಿತ್ತು ಎಂದು ಆರೋಪಿಸಿದ್ದಾರೆ. ಕಳೆದ ವಾರ ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಪಡೆ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್ ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ ಕ್ಷಿಪಣಿಗಳಿಗೆ ಬಳಸುವ ರಾಸಾಯನಿಕ ತುಂಬಿರುವುದು ಪತ್ತೆಯಾಗಿದೆ ಎಂದು ಹ್ಯಾಲೆ ತಿಳಿಸಿದ್ದಾರೆ. ಹಡಗನ್ನು ನಿಲ್ಲಿಸುವಂತೆ ಪದೇ, ಪದೇ ಸೂಚನೆ ನೀಡಿದ್ದರೂ ಕೂಡಾ ಮುಂದೆ ಸಾಗಿರುವುದಾಗಿ ಹ್ಯಾಲೆ ಎಕ್ಸ್ ಪೋಸ್ಟ್ ನಲ್ಲಿ ದೂರಿದ್ದಾರೆ.
ಈ ಮೂಲಕ ಚೀನಾ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ನೀಡುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಬಹಿರಂಗವಾಗಿದ್ದು ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹ್ಯಾಲೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇರಾನ್ ಆಡಳಿತವನ್ನು ಚೀನಾ ಬೆಂಬಲಿಸುತ್ತಿರುವುದು ಬಟಾಬಯಲಾಗಿದೆ. ಈ ವಾಸ್ತವವನ್ನು ನಾವು ಲಘುವಾಗಿ ಕಾಣುವಂತಿಲ್ಲ. ಇಸ್ರೇಲ್, ಅಮೆರಿಕ ಇರಾನ್ ಮೇಲೆ ಯುದ್ಧ ಸಾರಿದ ಮೇಲೆ ಚೀನಾ ನಿರಂತರವಾಗಿ ಇರಾನ್ ಗೆ ಬೆಂಬಲ ನೀಡುತ್ತಿರುವುದು ಸಾಬೀತಾಗಿದೆ ಎಂದು ಹ್ಯಾಲೆ ಹೇಳಿದರು. ಅಮೆರಿಕ ಮಿಲಿಟರಿ ಇರಾನ್ ಹಡಗನ್ನು ವಶಪಡಿಸಿಕೊಂಡ ಬೆನ್ನಲ್ಲೇ, ಅಮೆರಿಕ ಶಸ್ತ್ರಾಸ್ತ್ರ ಕಳ್ಳಸಾಗಣೆ ಆರೋಪ ಹೊರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಕದನ ವಿರಾಮದ ಎರಡನೇ ಸುತ್ತಿನ ಮಾತುಕತೆಯಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ ಎಂದು ಇರಾನ್ ತಿರುಗೇಟು ನೀಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.